ಈಗ ಮೆಕ್ಸಿಕೋ ದಲ್ಲಿ ರಿಮೇಕ್ ಆಗಿದೆ ಆಮಿರ್ ರ ಈ ಸೂಪರ್ ಹಿಟ್ ಚಿತ್ರ !

ಮೆಕ್ಸಿಕೋ ,ಮೇ 4: ಆಮಿರ್ ಖಾನ್ ಅವರ 3 ಈಡಿಯಟ್ಸ್ 2009ರಲ್ಲಿ ಭಾರತದಲ್ಲಿ ತೆರೆಕಂಡಾಗ ಅದು ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ನುಚ್ಚುನೂರಾಗಿಸಿತ್ತು. ರಾಜ್ ಕುಮಾರ್ ಹಿರಾನಿ ಅವರ ನಿರ್ದೇಶನದ ಈ ಚಲನಚಿತ್ರ ಭಾರತದ ಶಿಕ್ಷಣ ವ್ಯವಸ್ಥೆಯ ವಿಭಿನ್ನ ಆಯಾಮಗಳನ್ನು ವೀಕ್ಷಕರ ಮುಂದಿಟ್ಟಿತ್ತು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬ ಚರ್ಚೆಯನ್ನೂ ಈ ಚಿತ್ರ ಹುಟ್ಟು ಹಾಕಿತ್ತಲ್ಲದೆ ವಿಶ್ವದಾದ್ಯಂತ ಸಾಕಷ್ಟು ಪ್ರಶಂಸೆಯನ್ನೂ ಪಡೆದಿತ್ತು.
ಇದೀಗ ಈ ಸೂಪರ್ ಹಿಟ್ ಚಿತ್ರ ಮೆಕ್ಸಿಕೋದಲ್ಲಿ ರಿಮೇಕ್ ಆಗಿದೆ. ಈ ಚಿತ್ರದ ಟ್ರೈಲರ್ ನೋಡಿದರೆ ಸಾಕು ಈ ಚಿತ್ರ ಹಿಟ್ ಆಗಲು ಕಾರಣವಾದ ಅಂಶಗಳೆಲ್ಲವೂ ನಿಮ್ಮ ಮುಂದೆ ಬರುತ್ತದೆ. ಚಿತ್ರದಲ್ಲಿ ಅಲ್ಫೋನ್ಸೋ ದೋಸಲ್, ಕ್ರಿಶ್ಚಿಯನ್ ವಝ್ಖೀರ್ ಹಾಗೂ ಜರ್ಮನ್ ವಲ್ಡೆರ್ ಮೂಲ ಚಿತ್ರದಲ್ಲಿ ಆಮಿರ್ ಖಾನ್, ಮಾಧವನ್ ಮತ್ತು ಶರ್ಮನ್ ಜೋಷಿ ಮಾಡಿದ ಪಾತ್ರಗಳನ್ನು ನಿಭಾಯಿಸಿದ್ದರೆ ಕರೀನಾ ಕಪೂರ್ ಪಾತ್ರವನ್ನು ಮಾರ್ಥಾ ಹಿಗರೆಡ ನಿರ್ವಹಿಸಿದ್ದಾರೆ.
ಆದರೆ ಮೂಲ ಟ್ರೈಲರ್ ನಂತೆ ಈ ಮೆಕ್ಸಿಕನ್ ಸಿನೆಮಾದ ಟ್ರೈಲರ್ ನಲ್ಲಿ ರಾಂಚೋಳನ್ನು ಹುಡುಕಲು ರಾಜು ಮತ್ತು ಫರ್ಹಾನ್ ಕೈಗೊಳ್ಳುವ ಪಯಣದ ಬಗ್ಗೆ ಏನೂ ಹೇಳಲಾಗಿಲ್ಲ.






