ಉಗ್ರನೆಂದು ಭಾವಿಸಿ ಸೊಮಾಲಿಯ ಸಚಿವರ ಹತ್ಯೆ

ಮೊಗಾದಿಶು (ಸೊಮಾಲಿಯ), ಮೇ 4: ರಾಜಧಾನಿ ಮೊಗಾದಿಶುವಿನಲ್ಲಿ ಬುಧವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೊಮಾಲಿಯದ ಲೋಕೋಪಯೋಗಿ ಸಚಿವರನ್ನು ಭಯೋತ್ಪಾದಕನೆಂದು ತಪ್ಪಾಗಿ ಭಾವಿಸಿದ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆಗೈದಿವೆ.
ಭದ್ರತಾ ಪಡೆಗಳು ಆಕಸ್ಮಿಕವಾಗಿ ಸಚಿವ ಅಬ್ಬಾಸ್ ಅಬ್ದುಲ್ಲಾಹಿ ಶೇಖ್ ಸಿರಾಜಿ ಅವರ ಕಾರಿನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಮೊಗಾದಿಶು ಮೇಯರ್‌ರ ವಕ್ತಾರರೊಬ್ಬರು ತಿಳಿಸಿದರು.
ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳು ರಸ್ತೆ ತಡೆ ಏರ್ಪಡಿಸಿದ್ದ ಕಾರೊಂದನ್ನು ಕಂಡರು ಹಾಗೂ ಅದನ್ನು ಭಯೋತ್ಪಾದಕರು ಚಲಾಯಿಸುತ್ತಿರಬೇಕೆಂದು ಭಾವಿಸಿ ಅದರತ್ತ ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿ ಮೇಜರ್ ನೂರ್ ಹುಸೈನ್ ಹೇಳಿದರು.
Next Story





