ಸೌದಿ: ರಾಜಕುಮಾರ ಮಿಶಲ್ ಬಿನ್ ಅಬ್ದುಲಝೀಝ್ ನಿಧನ

ಜಿದ್ದಾ (ಸೌದಿ ಅರೇಬಿಯ), ಮೇ 4: ಸೌದಿ ಅರೇಬಿಯದ ನಿಷ್ಠ ಮಂಡಳಿಯ ಅಧ್ಯಕ್ಷ ರಾಜಕುಮಾರ ಮಿಶಲ್ ಬಿನ್ ಅಬ್ದುಲಝೀಝ್ ಬುಧವಾರ ನಿಧನರಾಗಿದ್ದಾರೆ ಎಂದು ಅರಮನೆಯ ಘೋಷಿಸಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮಕ್ಕಾ ಮಸೀದಿಯಲ್ಲಿ ಗುರುವಾರ ಇಶಾ ಪ್ರಾರ್ಥನೆ ನಡೆದ ಬಳಿಕ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು ಎಂದು ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.
ದೊರೆ ಅಬ್ದುಲಝೀಝ್‌ರ 14ನೆ ಪುತ್ರನಾಗಿ 1926 ಸೆಪ್ಟಂಬರ್ 5ರಂದು ಜನಿಸಿದ ಮಿಶಲ್, 2007ರಿಂದ ನಿಷ್ಠ ಮಂಡಳಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅವರು 1945ರಲ್ಲಿ ಉಪ ರಕ್ಷಣಾ ಸಚಿವ ಹಾಗೂ 1955ರಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
Next Story





