ಅಕ್ರಮ ಮರಳು ಸಾಗಣೆ: ಮೂರು ಟ್ರಾಕ್ಟರ್ ವಶ
ಮೂಡಿಗೆರೆ, ಮೇ 4: ತಾಲೂಕಿನ ದಾರದಹಳ್ಳಿಯಲ್ಲಿ ಬುಧವಾರ ಸಂಜೆ ವೇಳೆಯಲ್ಲಿ ಅಕ್ರಮವಾಗಿ ಹೇಮಾವತಿ ನದಿಯಿಂದ ಮರಳು ಸಾಗಿಸುತ್ತಿದ್ದ ಮೂರು ಟ್ರಾಕ್ಟರ್‌ಗಳನ್ನು ವೃತ್ತ ನಿರೀಕ್ಷಕ ಜಗದೀಶ್ ಅವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ದಾರದಹಳ್ಳಿ ಸಮೀಪ ಮೂರು ಟ್ರಾಕ್ಟರ್‌ಗಳು ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಪಿಐ ಜಗದೀಶ್ ಮತ್ತು ತಂಡ ಕೂಡಲೇ ಸ್ಥಳಕ್ಕೆ ದಾವಿಸಿದ್ದಾರೆ. ಅಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದ ಮೂರು ಟ್ರಾಕ್ಟರ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.
Next Story





