ಸಾಲಬಾಧೆ: ರೈತ ಆತ್ಮಹತ್ಯೆ
ಸೊರಬ, ಮೇ 4: ತಾಲ್ಲೂಕಿನ ಜಂಗಿನಕೊಪ್ಪ ಗ್ರಾಮದ ರೈತನೋರ್ವ ಸಾಲಬಾಧೆ ತಾಳಲಾರದೆ ಅತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಬಸವರಾಜ ಬಿನ್ ದ್ಯಾವಪ್ಪ (43) ಮೃತ ದುರ್ದೈವಿ. ಇವರ ತಾಯಿಯಾದ ಶಿವಮ್ಮನ ಹೆಸರಿನಲ್ಲಿ ಜಂಗಿನಕೊಪ್ಪ ಗ್ರಾಮದ ಸರ್ವೇ ನಂ. 42 ರಲ್ಲಿ 5 ಎಕರೆ ಜಮೀನಿದ್ದು ಜಮೀನಿನಲ್ಲಿ ಭತ್ತ ಬೆಳೆದಿದ್ದ.
ತಾಯಿ ಶಿವಮ್ಮನವರ ಹೆಸರಿನಲ್ಲಿ ಸೊರಬ ಪಟ್ಟಣದ ಬ್ಯಾಂಕ್‌ವೊಂದರಲ್ಲಿ 80 ಸಾವಿರ ರೂ. ಸಾಲ ಹಾಗೂ ಇತರ ಕೈಗಡ ಸಾಲವನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. ಮಳೆ ಇಲ್ಲದೆ ಬರದಿಂದಾಗಿ ಬೆಳೆದ ಬೆಳೆ ಕೈಗೆಟುಕದೆ ಸಾಲವನ್ನು ತೀರಿಸಲಾಗದೆ ಜಿಗುಪ್ಸೆ ಗೊಂಡು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗೆ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವರಾಜ ಮೃತಪಟ್ಟಿದ್ದಾರೆ.
ಮೃತ ರೈತನ ತಾಯಿ ಶಿವಮ್ಮ ನೀಡಿದ ದೂರಿನನ್ವಯ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





