ಬ್ರಹ್ಮಾವರ ಸೆಕ್ಟರ್ ಎಸ್‌ಬಿಎಸ್ ಸ್ಲೇಟ್ ಶಿಬಿರ

ಬ್ರಹ್ಮಾವರ, ಮೇ 4: ಸುನ್ನಿ ಸ್ಟುಡೆಂಟ್ ಫೆಡರೇಶನ್‌ನ ಸ್ಥಾಪಕ ದಿನದ ಅಂಗವಾಗಿ ಬ್ರಹ್ಮಾವರ ಸೆಕ್ಟರ್ ವತಿಯಿಂದ ಜಲ ಸಂರಕ್ಷಣೆ ಸಂದೇಶ ಮತ್ತು ಸೆಕ್ಟರ್ ಮಟ್ಟದ ಎಸ್‌ಬಿಎಸ್ ಮದ್ರಸ ವಿದ್ಯಾರ್ಥಿಗಳ ಸ್ಲೇಟ್ ಶಿಬಿರ ರಂಗನಕೆರೆ ನೂರುಲ್ ಹುದಾ ಮದ್ರಸ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಸೆಕ್ಟರ್ ಅಧ್ಯಕ್ಷ ನಿಝಾರ್ ಸಖಾಫಿ ಗಾಂಧಿನಗರ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಮಹಮ್ಮದಾಲಿ ಸಅದಿ ಶಿಬಿರವನ್ನು ಉದ್ಘಾಟಿಸಿ ಜಲ ಸಂರಕ್ಷಣೆಯ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಹೆಲ್ಪ್ ಲೈನ್ ಕನ್ವೀನರ್ ಇಬ್ರಾಹಿಂ ಮಜೂರು ಮುಖ್ಯ ತರಗತಿ ನಡೆಸಿಕೊಟ್ಟರು.
ಪ್ರತಿಭಾ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರತಿಭೆಯಾಗಿ ಹೊರಹೊಮ್ಮಿದ ಮುಹಮ್ಮದ್ ಆರೀಫ್ ಸಾಸ್ತಾನ ಇವರಿಗೆ ‘ದ ಸ್ಟಾರ್’ ಪ್ರಶಸ್ತಿ ನೀಡಲಾಯಿತು. ಮುಖ್ಯ ಅತಿಥಿಯಾಗಿ ಉಡುಪಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ಭದ್ರಗಿರಿ, ಡಿವಿಷನ್ ಕೋಶಾಧಿಕಾರಿ ಇಬ್ರಾಹಿಂ ಆರ್.ಕೆ., ಜೊತೆ ಕಾರ್ಯ ದರ್ಶಿ ನವಾಝ್ ಮಣಿಪುರ ಉಪಸ್ಥಿತರಿದ್ದರು.
ಸೆಕ್ಟರ್ ಎಸ್‌ಬಿಎಸ್ ಕನ್ವೀನರ್ ಮುತ್ತಲಿಬ್ ರಂಗನಕೆರೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿ ದರು.







