ಬೈಕ್‌ನಲ್ಲಿ ಬ್ರೌನ್‌ಶುಗರ್ ಮಾರಾಟ: ಓರ್ವನ ಬಂಧನ
ಬೆಂಗಳೂರು, ಮೇ 4: ಬೈಕ್‌ನಲ್ಲಿ ಮಾದಕ ವಸ್ತು ಬ್ರೌನ್‌ಶುಗರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ 44 ಗ್ರಾಂ ಬ್ರೌನ್‌ಶುಗರ್ ವಶಕ್ಕೆ ಪಡೆಯುವಲ್ಲಿ ಬಸವನಗುಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೆಂಗೇರಿ ಸಮೀಪದ ಕೆಎಚ್‌ಬಿ ಕಾಲನಿಯ ರಿಝ್ವಾನ್ ಬೇಗ್(27) ಎಂದು ಪೊಲೀಸರು ಗುರುತಿಸಿದ್ದಾರೆ.
ಹಳೇ ಕನಕಪುರ ರಸ್ತೆ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬ್ರೌನ್‌ಶುಗರ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಬುಧವಾರ ಮಧ್ಯಾಹ್ನ ದಾಳಿ ನಡೆಸಿದಾಗ ಆರೋಪಿ ರಿಝ್ವಾನ್ ಬೇಗ್ ಮಾರಾಟ ಜಾಲದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಬಳಿಯಿದ್ದ 44 ಗ್ರಾಂ ತೂಕದ ಮಾದಕ ವಸ್ತು ಬ್ರೌನ್‌ಶುಗರ್, ಬೈಕ್ ವಶಕ್ಕೆ ಪಡೆದು, ಇಲ್ಲಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
Next Story





