ಮನೆಗೆ ನುಗ್ಗಿದ ತಂಡದಿಂದ ದಾಂಧಲೆ
ಬೆಂಗಳೂರು, ಮೇ 4: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಾಂಧಲೆ ನಡೆಸಿರುವ ಘಟನೆ ಇಲ್ಲಿನ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೆಯ ಮುಂದೆ ಪಾರ್ಕಿಂಗ್ ಮಾಡುವ ವಿಚಾರವಾಗಿ ಶಿವಾಜಿ ನಗರದ ತಿಮ್ಮಯ್ಯ ರಸ್ತೆಯಲ್ಲಿರುವ ರೀಟಾ ಎಂಬವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ದಾಂಧಲೆ ನಡೆಸಿರುವುದಾಗಿ ತಿಳಿದುಬಂದಿದೆ. ಬುಧವಾರ ಪಾರ್ಕಿಂಗ್ ವಿಚಾರವಾಗಿ ರೀಟಾ ಅವರೊಂದಿಗೆ ಜಗಳ ತೆಗೆದ ಪಕ್ಕದ ಮನೆಯ ಸುಹೇಲ್ ಹಾಗೂ ಮುಹಮ್ಮದ್ ನೂರ್ ಸೇರಿ 20ಕ್ಕೂ ಹೆಚ್ಚು ಜನರು ಮನೆಗೆ ನುಗ್ಗಿ ದಾಂಧಲೆ ನಡೆಸಿ ಮನೆಯಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ವಿಕೃತಿ ಮೆರೆದಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮನೆಯಲ್ಲಿದ್ದ ಸೋಫಿಯಾ, ಸಿಸಿಲಿಯಾ, ಸಾಂಗ್ಲಿನ್ ಹಾಗೂ ಸ್ಟಾಲಿನ್ ಸೇರಿದಂತೆ ಕುಟುಂಬದ 8 ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೀಟಾ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಿವಾಜಿನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Next Story





