Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬೊಗಸೆ ವೌನದ ಜೊತೆಗೆ - ತೆರೆದಂತೆ ಹಾದಿ

ಬೊಗಸೆ ವೌನದ ಜೊತೆಗೆ - ತೆರೆದಂತೆ ಹಾದಿ

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ6 May 2017 12:01 AM IST
share
ಬೊಗಸೆ ವೌನದ ಜೊತೆಗೆ - ತೆರೆದಂತೆ ಹಾದಿ

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿರುವ ಜಯಶ್ರೀ ಬಿ. ಕದ್ರಿ ಅವರ ವೈಚಾರಿಕ ಬರಹಗಳ ಸಂಗ್ರಹ ‘ತೆರೆದಂತೆ ಹಾದಿ’ ಕೃತಿ. ವಿಷಯ ವೈವಿಧ್ಯಗಳೇ ಕೃತಿಯ ಹೆಗ್ಗಳಿಕೆ. ಸಾಹಿತ್ಯ, ಸಮಾಜ, ವಿಚಾರ ಹೀಗೆ ಬೇರೆ ಬೇರೆ ಮಗ್ಗುಲುಗಳಲ್ಲಿ ಬರಹಗಳು ಹೊರಳುತ್ತವೆ. ಈ ಕೃತಿಗೆ ವೈಚಾರಿಕ ಹಣೆಪಟ್ಟಿ ಅಷ್ಟು ಒಗ್ಗುವುದಿಲ್ಲ. ಯಾಕೆಂದರೆ ಇಲ್ಲಿರುವ ಲೇಖನಗಳು ಒಂದು ನಿರ್ದಿಷ್ಟ ಉದ್ದೇಶಗಳಿಂದ ಹುಟ್ಟಿದವುಗಳಲ್ಲ. ಲಾಲಿತ್ಯ ಬರಹಗಳ ಹೆಗ್ಗಳಿಕೆ. ಆದರೂ ವರ್ತಮಾನದ ಹತ್ತು ಹಲವು ವಿಷಯಗಳು ಕೃತಿಯಲ್ಲಿ ಚರ್ಚೆಗೊಳಗಾಗುತ್ತವೆ. ಇಲ್ಲಿ ಒಟ್ಟು 55 ಲೇಖನಗಳಿವೆ. ಹೆಚ್ಚಿನವುಗಳು ಮಹಿಳೆಯರ ಬದುಕು ಬವಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದವುಗಳು. ಇದೇ ಸಂದರ್ಭದಲ್ಲಿ ಟೀನೇಜ್, ಫೇಸ್‌ಬುಕ್, ಸೈಬರ್ ಫೆಮಿನಿಸಂ, ಲಿಪ್‌ಸ್ಟಿಕ್, ಸೌಂದರ್ಯ ಲಹರಿ....ಹೀಗೆ ದಿನ ನಿತ್ಯದ ಬದುಕಿನಲ್ಲಿ ಅವಿನಾಭಾವವಾಗಿರುವ ಹಲವು ಸಂಗತಿಗಳನ್ನು ಲವಲವಿಕೆಯಿಂದ ನಿರೂಪಿಸುತ್ತಾರೆ. ಬಾಲ್ಯ, ಮದುವೆ ಮೊದಲಾದವುಗಳನ್ನು ಹೆಣ್ಣು ಕಣ್ಣುಗಳಲ್ಲಿ ನೋಡಿ ಚರ್ಚಿಸುತ್ತಾರೆ. ಇ ಓದು ಮತ್ತು ಮಕ್ಕಳ ಸಾಹಿತ್ಯದ ಕುರಿತಂತೆ ಬರೆಯುತ್ತಾ ಬಾಲ ಸಾಹಿತ್ಯದ ನಿರ್ಲಕ್ಷದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಇಲ್ಲಿರುವ ಪ್ರತೀ ಬರಹದೊಳಗೂ ಒಂದು ಅಂತಃಕರಣವಿದೆ. ಅಕ್ಕರೆಯಿದೆ. ಪದ್ಯದ ಲಯವಿದೆ. ಆದುದರಿಂದಲೇ ಎಲ್ಲ ಬರಹಗಳೂ ನಮ್ಮನ್ನು ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ. ಮಾತು ವೌನಗಳ ಬಗ್ಗೆ ಹೇಳುತ್ತಾ ‘‘....ನಮ್ಮತನವನ್ನು ಬಿಟ್ಟುಕೊಡದೆ, ಶೋಷಣೆಗೆ ಒಳಗಾಗದೆ ಇರುವಷ್ಟು ಮಾತು ನಮಗೆ ಬೇಕು. ಹಾಗೆಯೇ ಒಂದು ಬೊಗಸೆ ವೌನವನ್ನು, ನಿಶ್ಶಬ್ದವನ್ನು ನಮ್ಮೆದೆಯ ಗುಡಿಯಲ್ಲಿಟ್ಟುಕೊಳ್ಳುವ ಕಾಳಜಿಯೂ ನಮಗೆ ಬೇಕು’’ ಎಂದು ಬರೆಯುತ್ತಾರೆ. ವೌನದ ಕಾವಿನೊಳಗೆ ಲೇಖಕಿಯ ಬರಹಗಳು ಇನ್ನಷ್ಟು ಮಾಗುವ ಅಗತ್ಯವೂ ಇದೆ ಅನ್ನಿಸುತ್ತದೆ. ಜಯಶ್ರೀ ಅವರು ಇನ್ನೂ ಉತ್ತಮವಾಗಿ ಬರೆಯಬಲ್ಲರು.

share
ಕಾರುಣ್ಯಾ
ಕಾರುಣ್ಯಾ
Next Story
X