ನಾಳೆ ನೀಟ್ ಪರೀಕ್ಷೆ

ಬೆಂಗಳೂರು, ಮೇ 6: ಸುಪ್ರಿಂ ಕೋರ್ಟ್‌ನ ಆದೇಶದಂತೆ ಮೊದಲ ಬಾರಿಗೆ ರಾಜ್ಯದಲ್ಲಿ ವೈದ್ಯ, ದಂತ ವೈದ್ಯ ಕೋರ್ಸ್‌ಗಳ ಆಕಾಂಕ್ಷಿಗಳು ಮೇ 7 ರಂದು ಅಧಿಕೃತ ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ.
2017-18 ನೆ ಸಾಲಿನಿಂದ ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ಪ್ರವೇಶಕ್ಕೆ ನೀಟ್ ಕಡ್ಡಾಯ ಮಾಡಲಾಗಿದ್ದು, 180 ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಯನ್ನು ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ 2017ರ ಪರೀಕ್ಷೆಯು ದೇಶದ 103 ನಗರಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ನಕಲು ಮಾಡದಂತೆ ತಡೆಯಲು ಸಿಬಿಎಸ್‌ಇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಲ್ಲದೆ, ವಸ್ತ್ರ ಸಂಹಿತೆಯನ್ನು ಜಾರಿ ಮಾಡಿದ್ದು, ಕುರ್ತಾ, ಪೈಜಾಮಾ, ಹೈಹೀಲ್ ಹಾಕುವಂತಿಲ್ಲ ಎಂದು ಈಗಾಗಲೇ ಮಾಹಿತಿ ರವಾನಿಸಲಾಗಿದೆ.
ಇನ್ನುಳಿದಂತೆ ಲಿಖಿತ ಅಥವಾ ಮುದ್ರಿತ ಬರಹ, ಜಾಮಿಟ್ರಿ ಬಾಕ್ಸ್, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಪೆನ್‌ಡ್ರೈವ್, ಎರೇಸರ್, ಲಾಗ್‌ಟೇಬಲ್, ಸ್ಕಾನರ್, ಎಲೆಕ್ಟ್ರಾನಿಕ್ ಪೆನ್ ತರದಂತೆ ಎಚ್ಚರಿಸಲಾಗಿದೆ. ಅಲ್ಲದೆ, ಸಂವಹನ ಸಾಧನಗಳಾದ ಮೊಬೈಲ್, ಬ್ಲೂಟೂತ್, ಇಯರ್‌ಫೋನ್, ಮೈಕ್ರೋಪೋನ್, ಹೆಲ್ತ್ ಬ್ಯಾಂಡ್, ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಯಾವುದೇ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ವಸ್ತ್ರ ಸಂಹಿತೆ ಜಾರಿ ಇರುವುದರಿಂದ ಅರ್ಧ ತೋಳಿನ, ಸರಳ ಉಡುಪು ಧರಿಸಬೇಕು. ತುಂಬು ತೋಳಿನ ಹಾಗೂ ಬಣ್ಣದ ಉಡುಪು ಧರಿಸಬಾರದು ಎಂದು ತಿಳಿಸಲಾಗಿದೆ. ಅದೇ ರೀತಿ ಆಭರಣ, ಶೂ ಧರಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.