ಇರಾನ್: ಗಣಿಯಲ್ಲಿ ಸಿಕ್ಕಿಕೊಂಡಿರುವ ಕಾರ್ಮಿಕರನ್ನು ರಕ್ಷಿಸುವ ಅವಕಾಶವಿಲ್ಲ

ಟೆಹರಾನ್, ಮೇ 6: ಇರಾನ್‌ನ ಕಲ್ಲಿದ್ದಲು ಗಣಿಯೊಂದರಲ್ಲಿ ಸುರಂಗ ಕುಸಿದು ಎರಡು ದಿನಗಳಿಂದ ಒಳಗೆ ಸಿಕ್ಕಿಹಾಕಿಕೊಂಡಿರುವ ಒಂಬತ್ತು ಕಾರ್ಮಿಕರನ್ನು ರಕ್ಷಿಸುವ ಯಾವುದೇ ಅವಕಾಶವಿಲ್ಲ ಎಂದು ಇರಾನ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ದುರಂತದಲ್ಲಿ ಈಗಾಗಲೇ ಕನಿಷ್ಠ 26 ಮಂದಿ ಸಾವಿಗೀಡಾಗಿದ್ದಾರೆ.
ಉತ್ತರ ಇರಾನ್‌ನಲ್ಲಿರುವ ಝೆಮೆಸ್ಟನ್ ಯೋರ್ಟ್ ಗಣಿಯ ಎರಡು ಕಿಲೋಮೀಟರ್ ಪ್ರದೇಶದ ಹೆಚ್ಚಿನ ಭಾಗದಲ್ಲಿ ವಿಷಾನಿಲಗಳು ತುಂಬಿಕೊಂಡಿವೆ. ಗಣಿ ಕಾರ್ಮಿಕರು ಸಿಲುಕಿಕೊಂಡಿರುವ ದುರ್ಬಲ ಕಾಲುದಾರಿಯನ್ನು ತೆರವುಗೊಳಿಸುವ ಕಾರ್ಯದಲ್ಲಿ ರಕ್ಷಣಾ ಕಾರ್ಯಕರ್ತರು ಭಾರೀ ಪ್ರಮಾಣದಲ್ಲಿ ಅಪಾಯಗಳನ್ನು ಎದುರಿಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಗಣಿಯಲ್ಲಿ ಭಾರೀ ಸ್ಫೋಟವೊಂದು ಸಂಭವಿಸಿದ ಬಳಿಕ ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿದ್ದಾರೆ.
‘‘ಗಣಿಯಲ್ಲಿ ಈಗ ಯಾವುದೇ ಕಾರ್ಮಿಕರು ಜೀವಂತವಾಗಿ ಇರುವ ಸಾಧ್ಯತೆ ಇಲ್ಲ’’ ಎಂದು ಉಪ ಆಂತರಿಕ ಸಚಿವ ಇಸ್ಮಾಯೀಲ್ ನಡ್ಜರ್ ಹೇಳಿರುವುದಾಗಿ ‘ಇಲ್ನ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story





