ಹಮಾಸ್ ಮುಖ್ಯಸ್ಥರಾಗಿ ಇಸ್ಮಾಯೀಲ್ ಹನಿಯಾ

ಗಾಝಾ ಸಿಟಿ (ಫೆಲೆಸ್ತೀನ್), ಮೇ 6: ಹಮಾಸ್ ಮುಖ್ಯಸ್ಥರಾಗಿ ಇಸ್ಮಾಯೀಲ್ ಹನಿಯಾ ಅವರನ್ನು ಆರಿಸಲಾಗಿದೆ. ಅವರು ಖಾಲಿದ್ ಮೆಶಾಲ್ ಅವರ ಸ್ಥಾನದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅವರು ಗಾಝಾ ಪಟ್ಟಿಯಲ್ಲಿ ಇದ್ದುಕೊಂಡೇ ಕಾರ್ಯ ನಿರ್ವಹಿಸುತ್ತಾರೆಂದು ನಿರೀಕ್ಷಿಸಲಾಗಿದೆ. ಗಾಝಾ ಪಟ್ಟಿಯ ಆಡಳಿತವನ್ನು 2007ರಿಂದ ಹಮಾಸ್ ನಿರ್ವಹಿಸುತ್ತಾ ಬಂದಿದೆ.
ನಿರ್ಗಮನ ಮುಖ್ಯಸ್ತ ಮೆಶಾಲ್ ದೋಹಾದಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ ಹಾಗೂ ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಗರಿಷ್ಠ ಎರಡು ಅವಧಿಯ ಅಧಿಕಾರವನ್ನು ಪೂರೈಸಿದ್ದಾರೆ.
Next Story





