ರಾಯಲ್ ಸೊಸೈಟಿಗೆ 3 ಭಾರತೀಯ ವಿಜ್ಞಾನಿಗಳ ಆಯ್ಕೆ

ಲಂಡನ್, ಮೇ 6: ಪ್ರಪಂಚದ ಅತ್ಯಂತ ಹಳೆಯ ವಿಜ್ಞಾನ ಅಕಾಡೆಮಿ ‘ರಾಯಲ್ ಸೊಸೈಟಿ’ಯ ಸದಸ್ಯರಾಗಿ ಭಾರತ ಮೂಲದ ಮೂವರು ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ.
2017ರ ಸಾಲಿಗೆ 50 ವಿಜ್ಞಾನಿಗಳು ಮತ್ತು 10 ವಿದೇಶಿ ಸದಸ್ಯರನ್ನು ಸೊಸೈಟಿಗೆ ಆಯ್ಕೆ ಮಾಡಲಾಗಿದೆ ಎಂದು ಲಂಡನ್‌ನ ರಾಯಲ್ ಸೊಸೈಟಿ ಶುಕ್ರವಾರ ಘೋಷಿಸಿದೆ.
ಮೂವರು ಭಾರತ ಮೂಲದ ವಿಜ್ಞಾನಿಗಳೆಂದರೆ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಕೃಷ್ಣ ಚಟರ್ಜಿ, ಆಕ್‌ಫರ್ಡ್ ವಿಶ್ವವಿದ್ಯಾನಿಲಯದ ಯದ್ವಿಂದರ್ ಮಳಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸುಭಾಶ್ ಖೋತ್.
Next Story





