Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಚಿತ್ತಾಕರ್ಷಕ ಖಾದಿ ಬಟ್ಟೆಗಳಿಗೆ ಮನಸೋತ...

ಚಿತ್ತಾಕರ್ಷಕ ಖಾದಿ ಬಟ್ಟೆಗಳಿಗೆ ಮನಸೋತ ಸಿಲಿಕಾನ್‌ಸಿಟಿ ಜನರು

ಪ್ರಕಾಶ್ ಅವರಡ್ಡಿಪ್ರಕಾಶ್ ಅವರಡ್ಡಿ6 May 2017 10:56 PM IST
share
ಚಿತ್ತಾಕರ್ಷಕ ಖಾದಿ ಬಟ್ಟೆಗಳಿಗೆ ಮನಸೋತ ಸಿಲಿಕಾನ್‌ಸಿಟಿ ಜನರು

ಬೆಂಗಳೂರು, ಮೇ 6: ಜನರು ಖಾದಿ ಬಟ್ಟೆಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದಕ್ಕೆ ಅಪವಾದವೆಂಬಂತೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಖಾದಿ ಉತ್ಸವಕ್ಕೆ ರಾಜ್ಯ ಹಾಗೂ ಅಂತಾರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದು, ಎ.24ರಿಂದ ಮೇ 6ರವರೆಗೆ 13 ಕೋಟಿ ರೂ. ವ್ಯವಹಾರ ನಡೆದಿದೆ.

ಖಾದಿ ಉತ್ಸವದ ಮಳಿಗೆಗಳು ಗ್ರಾಹಕರನ್ನು ಯಥೇಚ್ಛವಾಗಿ ಆಕರ್ಷಿಸುತ್ತಿದ್ದು, ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು, ಪಾಲಿವಸ್ತ್ರಗಳು ಹಾಗೂ ಖಾದಿಯ ವೈವಿಧ್ಯಮಯ ಉತ್ಪನ್ನಗಳಿಗೆ ಗ್ರಾಹಕರು ಮಾರುಹೋಗಿ ಖರೀದಿಗೆ ಮುಂದಾಗಿರುವ ದೃಶ್ಯ ಎಲ್ಲ ಮಳಿಗೆಗಳಲ್ಲೂ ಕಂಡು ಬಂತು.

ಅಲ್ಲದೆ, ಮಳಿಗೆಗಳಲ್ಲಿ ಯುವ ಪೀಳಿಗೆಯ ಮನ ಮೆಚ್ಚುವ ಮೋಹಕ ಖಾದಿ ಡಿಸೈನರ್ ಉಡುಪುಗಳು, ನಿಸರ್ಗ ಷರ್ಟ್‌ಗಳು, ಗ್ರಾಮೀಣ ಗುಡಿಗಾರರಿಂದ ತಯಾರಾದ ಮರದ ಕೆತ್ತನೆಯ ವಸ್ತುಗಳು, ಪೀಠೋಪಕರಣಗಳು, ಆಕರ್ಷಕ ಹಾಗೂ ನೈಸರ್ಗಿಕ ಸೆಣಬಿನ ಉತ್ಪನ್ನಗಳು, ಗ್ರಾಮೀಣ ಚರ್ಮೋದ್ಯೋಗ ಉದ್ದಿಮೆಯಲ್ಲಿ ತಯಾರಾದ ಆಕರ್ಷಕ ಹಾಗೂ ಬಾಳಿಕೆ ಬರುವಂತಹ ಪಾದರಕ್ಷೆಗಳು, ಗ್ರಾಮೀಣ ಕುಂಬಾರಿಕೆಯ ಕುಶಲ ವಸ್ತುಗಳು, ಕೈ ಚೀಲಗಳು, ಮಹಿಳೆಯರ ಆಕರ್ಷಣೀಯ ವ್ಯಾನಿಟಿ ಬ್ಯಾಗ್‌ಗಳು, ಪರ್ಸ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಕೈ ಕಾಗದ ವಸ್ತುಗಳು, ನೈಜ ಹಾಗೂ ಶುದ್ಧ ಜೇನು ತುಪ್ಪ, ಗೋಡಂಬಿ ಹಾಗೂ ಔಷಧೀಯ ಉತ್ಪನ್ನಗಳಿದ್ದು ಇವುಗಳೂ ಗ್ರಾಹಕರನ್ನು ಆಕರ್ಷಿಸುತ್ತಿವೆ

ಒಂದು ತಿಂಗಳ ಕಾಲ ಆಯೋಜಿಸಿರುವ ಖಾದಿ ಉತ್ಸವದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಉತ್ಸವದಲ್ಲಿ ಖಾದಿ ವಸ್ತ್ರಗಳು, ಕೈಮಗ್ಗ, ಕರಕುಶಲ ವಸ್ತುಗಳ ಮಾರಾಟದಲ್ಲಿ ಶೇ.10ರಿಂದ 50 ರಷ್ಟು ರಿಯಾಯಿತಿಯನ್ನು ಕಲ್ಪಿಸಲಾಗಿದೆ. ಇದರಿಂದ, ಹೆಚ್ಚೆಚ್ಚು ಗ್ರಾಹಕರು ಖಾದಿ ಬಟ್ಟೆಗಳ ಖರೀದಿಗಾಗಿ ಬೆಂಗಳೂರು ಸೇರಿ ಇತರೆ ಪ್ರದೇಶಗಳಿಂದ ಬರುತ್ತಿದ್ದಾರೆ. ಹೀಗಾಗಿ, ವ್ಯಾಪಾರಸ್ಥರೂ ಖುಷಿಗೊಂಡಿದ್ದು, ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಖಾದಿ ವ್ಯಾಪಾರಿ ಪ್ರವೀಣ್ ಗಿಡದನ ಅಪ್ಪಗೋಳ ಅವರನ್ನು ಮಾತನಾಡಿಸಿದಾಗ, "ಖಾದಿ ಉತ್ಸವ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 3 ಲಕ್ಷ ರೂ. ವ್ಯಾಪಾರವಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ಖಾದಿ ಉತ್ಸವಕ್ಕೆ ಹೋಲಿಸಿದರೆ ಬೆಂಗಳೂರಿನ ವ್ಯಾಪಾರವೇ ಬಲು ಖುಷಿ ತಂದಿದೆ" ಎಂದು ಹೇಳುತ್ತಾರೆ.

ಒಟ್ಟು 20 ಲಕ್ಷ ರೂ.ವಹಿವಾಟು ನಡೆಯಬಹುದೆಂದು ಅಂದಾಜಿಸಿದ್ದೇವೆ. ಹಾಗೆಯೇ ನಾವಂದುಕೊಂಡಷ್ಟು ಗ್ರಾಹಕರೂ ಖಾದಿ ಉತ್ಸವದ ಕಡೆಗೆ ಬರುತ್ತಿದ್ದಾರೆ. ಅಲ್ಲದೆ, ಈ ಖಾದಿ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ. ಹಾಗೂ ಚಳಿಗಾಲದಲ್ಲಿ ಬಿಸಿ ನೀಡುತ್ತದೆ ಎಂದು ಹೇಳಿದರು.

ಮತ್ತೊಬ್ಬ ಖಾದಿ ವ್ಯಾಪಾರಿ ಬಸವರಾಜ್ ಅವರನ್ನು ಮಾತನಾಡಿಸಿದಾಗ , "ನಮ್ಮ ಮಳಿಗೆಯಲ್ಲಿ 4,200 ರಿಂದ 9,500 ರೂ.ಬೆಲೆಯ ಸೀರೆಗಳಿದ್ದು, ಇಲ್ಲಿಯವರೆಗೆ 5 ಲಕ್ಷ ರೂ.ವ್ಯಾಪಾರವಾಗಿದೆ. ಆದರೆ, ಇದೇ ಖಾದಿ ಉತ್ಸವವನ್ನು ಜನವರಿಯಲ್ಲಿ ಆಯೋಜಿಸಿದ್ದರೆ ಇನ್ನೂ ಉತ್ತಮ ವ್ಯಾಪಾರವಾಗುತ್ತಿತ್ತು" ಎಂದು ಹೇಳಿದರು.

ಎಪ್ರಿಲ್, ಮೇ ತಿಂಗಳಲ್ಲಿ ಶಾಲೆಗಳು ಪ್ರಾರಂಭವಾಗುವುದರಿಂದ ಪೋಷಕರಿಗೆ ಖಾದಿ ಉತ್ಸವದ ಕಡೆಗೆ ಹೆಚ್ಚು ಬರಲಾಗುವುದಿಲ್ಲ. ಹೀಗಾಗಿ, ಜನವರಿ ತಿಂಗಳಲ್ಲಿ ಖಾದಿ ಉತ್ಸವ ಪ್ರಾರಂಭವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದರು.

‘ಖಾದಿ ಉತ್ಸವಕ್ಕೆ ಬಂದಿರುವುದು ಖುಷಿ ಅನಿಸುತ್ತಿದೆ. ಈ ಉತ್ಸವದಲ್ಲಿ ಎಲ್ಲ ಡಿಸೈನ್ ಇರುವ ಬಟ್ಟೆಗಳೂ ಇದ್ದು, ಕೊಂಡುಕೊಳ್ಳಲು ಮನಸ್ಸಾಗುತ್ತಿದೆ. ಇಂತಹ ಉತ್ಸವಗಳು ಪದೇ ಪದೇ ಆಯೋಜನೆಯಾಗಬೇಕು.’
-ದಿಗಂಬರ ಶಾಂತಪುರೆ, ಗ್ರಾಹಕ

‘ಖಾದಿ ಉತ್ಸವದ ಮಳಿಗೆಗಳಲ್ಲಿ ವಿವಿಧ ರೀತಿಯ ಖಾದಿ ಬಟ್ಟೆಗಳು ಹಾಗೂ ಶರ್ಟ್‌ಗಳಿದ್ದು, ದೇಶಿಯತೆ ಈ ಉತ್ಸವದಲ್ಲಿ ಕಂಡು ಬರುತ್ತಿದೆ. ಇಂತಹ ಉತ್ಸವವನ್ನು ತಾವು ಇದೇ ಮೊದಲ ಬಾರಿಗೆ ನೋಡಿದ್ದು, ಖುಷಿಯಾಗುತ್ತಿದೆ.’
-ಪುಂಡಲಿಕ ಎಕ್ಕುಂಬಿ, ಗ್ರಾಹ

share
ಪ್ರಕಾಶ್ ಅವರಡ್ಡಿ
ಪ್ರಕಾಶ್ ಅವರಡ್ಡಿ
Next Story
X