ಪಿಪಿಸಿ ವಿದ್ಯಾರ್ಥಿ ಐಐಟಿ ತರಬೇತಿಗೆ ಆಯ್ಕೆ

ಉಡುಪಿ, ಮೇ 6: ಇಲ್ಲಿನ ಪೂರ್ಣಪ್ರಜ್ಞ ಪದವಿ ಕಾಲೇಜಿನ ಪ್ರಥಮ ಬಿಎಸ್ಸಿಯಲ್ಲಿ ಓದುತ್ತಿರುವ ರಾವ್ ಸುಹಾಸ್ ದೇವರಾಜ್ ಕಾನ್ಪುರದ ಐಐಟಿಯಲ್ಲಿ ಮೇ ತಿಂಗಳಿನಿಂದ ಜೂನ್‌ವರೆಗೆ ನಡೆಯಲಿರುವ ಭೌತಶಾಸ್ತ್ರಕ್ಕೆ ಸಂಬಂಧಿಸಿದ ವಿಶೇಷ ತರಬೇತಿಗೆ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಭೌತಶಾಸ್ತ್ರ ಅಧ್ಯಾಪಕರ ಸಂಘ ನಡೆಸಿದ್ದ ಪದವಿ ವಿದ್ಯಾರ್ಥಿಗಳ ಭೌತಶಾಸ್ತ್ರದ ರಾಷ್ಟ್ರೀಯ ಮಟ್ಟದ ಪರೀಕ್ಷೆಗೆ ಹಾಜರಾಗಿದ್ದ 12,768 ಅಭ್ಯರ್ಥಿಗಳಲ್ಲಿ ಸುಹಾಸ್ 21ನೇ ರ್ಯಾಂಕ್ ಪಡೆದು ಅಖಿಲ ಭಾರತ ಮಟ್ಟದ ಈ ತರಬೇತಿಗೆ ಆಯ್ಕೆಯಾಗಿದ್ದಾರೆ.
ಕಳೆದ ಸತತ ಮೂರು ವರ್ಷಗಳಿಂದ ಪಿಪಿಸಿಯ ವಿದ್ಯಾರ್ಥಿಗಳು ಈ ರಾಷ್ಟ್ರೀಯ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ ಶೆಟ್ಟಿ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
Next Story





