ಇಂಜಿನಿಯರ್ ಆತ್ಮಹತ್ಯೆ
ಬೆಂಗಳೂರು, ಮೇ 6: ಸಿವಿಲ್ ಇಂಜಿನಿಯರ್ ಒಬ್ಬರು ಮಹಡಿಯ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಪಂಜಾಬ್ ರಾಜ್ಯದ ಕರಣ್ ಬೀರೆ(34) ಆತ್ಮಹತ್ಯೆ ಮಾಡಿಕೊಂಡಿರುವ ಸಿವಿಲ್ ಇಂಜಿನಿಯರ್ ಎಂದು ಪೊಲೀಸರು ಗುರುತಿಸಿದ್ದಾರೆ.
ಸಿವಿಲ್ ಇಂಜಿನಿಯರ್ ಆಗಿರುವ ಕರಣ್, ನಗರದ ಹರಳೂರು ಮುಖ್ಯರಸ್ತೆಯಲ್ಲಿನ ಸಾಯಿಪುರ್ ಹೈ ಎಂಡ್ ಪಾಯಿಂಟ್ ಅಪಾರ್ಟ್‌ಮೆಂಟ್‌ನ 1ನೆ ಮಹಡಿ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ 11:30ರ ಸುಮಾರಿನಲ್ಲಿ 4ನೆ ಮಹಡಿ ಮೇಲಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಬೆಳ್ಳಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





