ಆನೆಗುಂಡಿ ರಕ್ಷಿತಾರಣ್ಯ: ಅವೈಜ್ಞಾನಿಕ ಹಾಲುಮಡ್ಡಿ ಸಂಗ್ರಹಕ್ಕೆ ನೂರಾರು ಮರಗಳು ಆಹುತಿ

ಸುಳ್ಯ, ಮೇ 6: ಸುಳ್ಯ ತಾಲೂಕಿನ ಕನಕಮಜಲು ಆನೆಗುಂಡಿ ರಕ್ಷಿತಾರಣ್ಯ ದಲ್ಲಿ ಹಾಲುಮಡ್ಡಿ ಮರಗಳ ಅವೈಜ್ಞಾ ನಿಕ ಟ್ಯಾಪಿಂಗ್‌ನಿಂದಾಗಿ ನೂರಾರು ಮರಗಳು ಧರೆಗುರುಳಿವೆ.
ರಕ್ಷಿತಾರಣ್ಯದಲ್ಲಿ ನೂರಕ್ಕೂ ಅಧಿಕ ಬೃಹತ್ ಮರಗಳು ಈಗಾಗಲೇ ಬಿದ್ದಿದರೆ ಮತ್ತಷ್ಟು ಮರಗಳು ಗಾಳಿ ಮಳೆಗೆ ಉರುಳಿಬೀಳುವ ಅಂಚಿಗೆ ತಲುಪಿವೆ.
ರಕ್ಷಿತಾರಣ್ಯ ಗಡಿ ಸಮೀಪ ಸುತ್ತಾಡಿದಾಗ ಈ ರೀತಿ ದಂಧೆಕೋರರ ಹಣದಾಸೆಗೆ ಮರಗಳ ನಾಶವಾಗುತ್ತಿರುವುದು ಕಂಡುಬರುತ್ತಿವೆ.
ಬೃಹತ್ ಮರಗಳನ್ನು ಬೇಕಾಬಿಟ್ಟಿ ಟ್ಯಾಪಿಂಗ್ ಮಾಡಿದ್ದು ತಿರುಳಿನ ಭಾಗದ ವರೆಗೆ ಸಾಕಷ್ಟು ಕತ್ತರಿಸಿದ್ದಾರೆ. ಪರಿಣಾಮ ಮರದ ಬುಡ ಕ್ಯಾನ್ಸರ್ ಆಗಿ ದುಸ್ಥಿತಿಗೆ ತಲುಪಿದೆ.
ಇಲಾಖೆ ಸ್ಥಳೀಯರಲ್ಲದವರಿಗೆ ಟೆಂಡರ್ ಮೂಲಕ ಹಾಲುಮಡ್ಡಿ ಸಂಗ್ರಹಿಸಲು ಅವಕಾಶ ನೀಡಿತ್ತು ಎಂದು ತಿಳಿದು ಬಂದಿದೆ. ಅದರಂತೆ ಸಂಗ್ರಹಣೆ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯರು ಟೆಂಡರ್‌ದಾರರೇ ಮರಗಳ ಈ ದುಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ಇಲಾಖೆ ಈ ಆರೋಪವನ್ನು ನಿರಾಕರಿಸುವ ಮೂಲಕ ಹಿಂದೆ ಅರಣ್ಯದಿಂದ ಕದ್ದು ಹಾಲುಮಡ್ಡಿ ಸಂ್ರಹಿಸಿದವರೇ ಇದಕ್ಕೆ ಕಾರಣ ಎಂದು ಪ್ರತ್ಯಾರೋಪಿಸುತ್ತಿದ್ದಾರೆ.
ಸ್ಥಳೀಯರು ವಿನಾ ಕಾರಣ ಆರೋಪಿಸುತ್ತಿದ್ದಾರೆ. ಕದ್ದು ಹಾಲುಮಡ್ಡಿ ಸಂಗ್ರಹಿಸುತ್ತಿದ್ದ ದಂಧೆಕೋರರು ಅವೈಜ್ಞಾನಿಕವಾಗಿ ಟ್ಯಾಪಿಂಗ್ ಮಾಡಿರುವುದರಿಂದ ಮರಗಳು ಹಾನಿಯಾಗಿ ಧರೆಗುರುಳಿವೆ. ಹಾಲುಮಡ್ಡಿ ಸಂಗ್ರಹಿಸಲು ಇತ್ತೀಚೆಗಷ್ಟೇ ನಿಯಮಾನುಸಾರವಾಗಿ ಇ-ಟೆಂಡರ್ ಮೂಲಕ ನೀಡಿದ್ದೇವೆ. ಇನ್ನೂ ಮಳೆಗಾಲ ಕಳೆದಿಲ್ಲ. ಟೆಂಡರ್‌ದಾರರಿಂದ ಸಮಸ್ಯೆಯಾಗಿದ್ದರೆ ಮುಂದೆ ಪರಿಶೀಲಿಸುತ್ತೇವೆ.
ವಿ.ಟಿ. ಕಾರ್ಯಪ್ಪ ುತ್ತೂರು ವಲಯ ಅರಣ್ಯಾಧಿಕಾರಿ