ನೀರ್ಚಾಲು: ಅಖಿಲ ಭಾರತ ಮೊಗೇರ ಮಹಾ ಸಂಗಮ

ಕಾಸರಗೋಡು, ಮೇ 6: ಕೇರಳ ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಹಾಗೂ ಇದರ ಕಾಸರಗೋಡು ಜಿಲ್ಲಾ ಘಟಕದ 15ನೆ ವಾರ್ಷಿಕೋತ್ಸವದ ಅಂಗವಾಗಿ ಅಖಿಲ ಭಾರತ ಮೊಗೇರ ಮಹಾ ಸಂಗಮವು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನ ಸ್ವಾಮಿ ಆನಂದ ತೀರ್ಥ ಸ್ಮಾರಕ ವೇದಿಕೆಯಲ್ಲಿ ಶನಿವಾರ ಆರಂಭಗೊಂಡಿತು.
ಕೇರಳ-ಕರ್ನಾಟಕ ಮೊಗೇರ ಸಮುದಾಯ ಸಂಘಟನೆಗಳ ಸಹ ಕಾರದಲ್ಲಿ ನಡೆಯುತ್ತಿರುವ ಮಹಾ ಸಂಗಮವನ್ನು ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅ.ಭಾ.ಮೊ. ಮಹಾ ಸಂಗಮದ ಅಧ್ಯಕ್ಷ ಧರ್ಮದರ್ಶಿ ಬಾಬು ಪಚ್ಲಂಪಾರೆ, ಮಧೂರು ಕ್ಷೇತ್ರದಲ್ಲಿ ಮದರು ಮಾತೆಯ ಶಿಲಾ ವಿಗ್ರಹ ಸ್ಥಾಪನೆ, ಮೊಗೇರ ಆರಾಧನಾಲಯಗಳ ನಿರ್ಮಾಣ, ಉದ್ಯೋಗ ಹಾಗೂ ಶಿಕ್ಷಣದ ಅಭಿವೃದ್ಧಿಗೆ ಸರಕಾರದ ಗಮನ ಸೆಳೆಯುವುದೇ ಈ ಮಹಾ ಸಂಗಮದ ಮುಖ್ಯ ಉದ್ದೇಶ ಎಂದರು.
ಬದಿಯಡ್ಕ ಗ್ರಾಪಂ ಸದಸ್ಯ ಡಿ.ಶಂಕರ, ಶಾಂತಾ ಬಾರಡ್ಕ, ಮೊಗೇರ ಸಂಘದ ಜಿಲ್ಲಾಧ್ಯಕ್ಷ ಅಂಗಾರ ಅಜಕ್ಕೋಡು, ಮೊಗೇರ ಸಂಗಮದ ಪದಾಧಿಕಾರಿಗಳಾದ ಸೀತಾರಾಮ ಕೊಂಚಾಡಿ, ವಿಜಯ ವಿಕ್ರಮ ರಾಮಕುಂಜ, ಕೆ.ಮಾಣಿ ಕಮ್ಮರಗೋಡು, ಸುರೇಶ್ ಕುಮಾರ್ ಬಂಟ್ವಾಳ, ರವಿಚಂದ್ರ ಪಡುಬೆಟ್ಟು, ಮೊಗೇರ ಸಂಘದ ಪ್ರ.ಕಾರ್ಯದರ್ಶಿ ಕೆ.ಕೆ.ಸ್ವಾಮಿಕೃಪಾ,ಗಿರಿಜಾ ತಾರನಾಥ್, ಪೂವಪ್ಪ ಮೂಡಿಗೆರೆ, ಮಾಯಿಲಪ್ಪ ಪುತ್ತೂರು, ನ್ಯಾಯವಾದಿ ಶೈನ್ ಕುಮಾರ್, ಸಿ.ಎಚ್.ಶ್ಯಾಮ, ರಾಧಾಕೃಷ್ಣ ಉಳಿಯತ್ತಡ್ಕ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಮೋಹನ ಯು.ಮಂಜೇಶ್ವರ ಸ್ವಾಗತಿಸಿದರು. ಗಣೇಶ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.ಕೇಶವ ದೈತೋಟ ವಂದಿಸಿದರು. ಆದರ್ಶ ಪಟ್ಟತ್ತಮೊಗರು ನಿರೂಪಿಸಿದರು. ಬಳಿಕ ಕಲಾ ಸಾಂಸ್ಕತಿಕ, ಚಿತ್ರ ರಚನಾ ಸ್ಪರ್ಧೆಗಳು ಜರಗಿದವು.
ಮೇ 7ಕ್ಕೆ ಬೆಳಗ್ಗೆ ಅಖಿಲ ಭಾರತ ಮೊಗೇರ ಪ್ರತಿನಿಧಿ ಸಮ್ಮೇಳನ, ವಿಚಾರಗೋಷ್ಠಿ ಜರಗಲಿದೆ. ಅಪರಾಹ್ನ 2:30ರಿಂದ ಜರಗುವ ಸಮಾರೋಪ ಸಮಾರಂಭದಲ್ಲಿ ಮೊಗೇರ ರತ್ನ ಪ್ರಶಸ್ತಿ ಪ್ರದಾನಗೈಯಲಾಗುವುದು. ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಅಂಚತ್ತಿಂಚ ಎಂಚ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.







