ದಾನವು ಮನುಷ್ಯನನ್ನು ವಿಪತ್ತುಗಳಿಂದ ರಕ್ಷಿಸುತ್ತದೆ: ತ್ವಾಕ ಅಹ್ಮದ್ ಮುಸ್ಲಿಯಾರ್
ಪುನರ್ ನಿರ್ಮಾಣಗೊಂಡ ರೆಂಜಲಾಡಿ ಮಸೀದಿ ಉದ್ಘಾಟನೆ

ಪುತ್ತೂರು, ಮೇ 6: ದಾನವು ಮನುಷ್ಯನನ್ನು ವಿಪತ್ತುಗಳಿಂದ ರಕ್ಷಿಸುತ್ತದೆ. ಸಮಾಜದ ಒಳಿತಿಗಾಗಿ ದುಡಿಯುವ ಸಂಘಟನೆಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ದಾನ ಮಾಡುವುದು ಉತ್ತಮ ಕಾರ್ಯವಾಗಿದ್ದು ಆ ರೀತಿಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಹೇಳಿದರು.
ರೆಂಜಲಾಡಿಯಲ್ಲಿ ಪುನರ್‌ನಿರ್ಮಾಣಗೊಂಡ ಬದ್ರಿಯಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಸೀದಿಯನ್ನು ವಕ್ಫ್‌ಗೊಳಿಸಿ ಮಾತನಾಡಿದರು.
ಮೂಡಿಗೆರೆ ಖಾಝಿ ಶೈಖುನಾ ಎಂ.ಎ ಖಾಸಿಂ ಮುಸ್ಲಿಯಾರ್ ತಾಯಲಂಗಾಡಿರವರು ಮಾತನಾಡಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಹಾಜಿ ಮುಸ್ತಫಾ ಕೆಂಪಿ ಮಾತನಾಡಿ, ಸೌಹಾರ್ದತೆಯೆಂಬುವುದು ನಮ್ಮ ದೇಶದ ಉಸಿರಾಗಿದ್ದು ಅದು ನಾಶವಾದರೆ ಪ್ರಜಾಪ್ರಭುತ್ವವೇ ನಾಶಗೊಂಡಂತೆ. ಸೌಹಾರ್ದ ಸಂಗಮವನ್ನು ಹೆಚ್ಚಾಗಿ ಮುಸ್ಲಿಮರೇ ಏರ್ಪಡಿಸುತ್ತಿದ್ದು ಅದರಲ್ಲಿ ಭಾಗವಹಿಸುವುದೂ ಮುಸ್ಲಿಮರೇ ಆಗಿದ್ದಾರೆ. ಇದು ಬದಲಾಗಬೇಕಾಗಿದ್ದು ಎಲ್ಲ ಧರ್ಮದವರೂ ಸೇರಿಕೊಂಡು ಸೌಹಾರ್ದ ಸಮಾವೇಶ ನಡೆಸಿದಾಗ ಅದು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಮೂಡಿಗೆರೆ ಖಾಝಿ ಶೈಖುನಾ ಎಂ.ಎ ಖಾಸಿಂ ಮುಸ್ಲಿಯಾರ್ ತಾಯಲಂಗಾಡಿ ಜುಮಾ ಖುತುಬಾ ನಿರ್ವಹಿಸಿದರು. ಶೈಖುನಾ ಸೈಯದ್ ಅಲಿ ತಂಙಳ್ ಕುಂಬೋಳ್ ಜುಮಾ ನಮಾರ್ ನಿರ್ವಹಿಸಿದರು.
ರೆಂಜಲಾಡಿ ಮಸೀದಿ ಅಧ್ಯಕ್ಷ ಕೆ.ಆರ್. ಹುಸೈನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸೀದಿ ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷರಾದ ಎಪಿಎಂಸಿ ಸದಸ್ಯ ವಿ.ಎಚ್ ಅಬ್ದುಲ್ ಶಕೂರ್ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ , ಕುಂಬ್ರ ಕೆಐಸಿ ವಿದ್ಯಾಸಂಸ್ಥೆಯ ಪ್ರೊ. ಅನೀಸ್ ಕೌಸರಿ , ಜಿಪಂ ಸದಸ್ಯ ಎಂ. ಎಸ್ ಮಹಮ್ಮದ್, ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್. ಬಿ ಮುಹಮ್ಮದ್ ದಾರಿಮಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್, ಕೆದಂಬಾಡಿ ಗ್ರಾಪಂ ಸದಸ್ಯ ಬೋಳೋಡಿ ಚಂದ್ರಹಾಸ ರೈ ,ಮಹಮೂದುಲ್ ಪೈಝಿ ಓಲೆಮುಂಡೋವು, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಬೊಟ್ಯಾಡಿ ,ಮುಂಡೂರು ಗ್ರಾಪಂ ಸದಸ್ಯ ಶಿವನಾಥ್ ರೈ ಮೇಗಿನಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಬೀಟಿಗೆ ಖತೀಬ್ ಅಬ್ದುರ್ರರಝಾಕ್ ದಾರಿಮಿ ಸ್ವಾಗತಿಸಿದರು. ಪ್ರಚಾರ ಸಮಿತಿ ಸಂಚಾಲಕ ಕೆ.ಎಂ ಹನೀಪ್ ರೆಂಜಲಾಡಿ ಹಾಗೂ ಕೆಎಂಎ ಕೊಡಂಗಾಯಿ ಕಾರ್ಯಕ್ರಮ ನಿರೂಪಿಸಿದರು







