ಕರ್ಣಾಟಕ ಬ್ಯಾಂಕ್ ಗೆ ಎಸ್‌ಟಿಪಿ ಪ್ರಶಸ್ತಿ
ಮಂಗಳೂರು, ಮೇ 6: ಕರ್ಣಾಟಕ ಬ್ಯಾಂಕ್ 2016ರ ಬ್ಯಾಂಕ್ ಆಫ್ ನ್ಯೂಯಾರ್ಕ್ ನೀಡುತ್ತಿರುವ ಎಸ್‌ಟಿಪಿ(ದ್ವಿತೀಯ)ಪ್ರಶಸ್ತಿಗೆ ಪಾತ್ರವಾಗಿದೆ.
ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರು ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲನ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯಸ್ಥ ಅನೀಶ್ ಕುಮಾರ್‌ರಿಂದ ಈ ಪ್ರಶಸ್ತಿಯನ್ನು ಮೇ 4ರಂದು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಸ್ವೀಕರಿಸಿದರು.
ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲನ್ 2016ನೆ ಸಾಲಿನಲ್ಲಿ ಕರ್ಣಾಟಕ ಬ್ಯಾಂಕ್‌ನ ಪಾವತಿಗೆ ಸಂಬಂಧಿಸಿದಂತೆ ಅತ್ಯಂತ ಕಡಿಮೆ ಮಾನವ ಸೇವೆಗಳನ್ನು ಬಳಸಿಕೊಂಡಿದ್ದು, ಎಸ್‌ಟಿಪಿ ರೇಟ್ ಶೇ 93.23 ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲನ್ ಕರ್ಣಾಟಕ ಬ್ಯಾಂಕ್‌ನ ಈ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದೆ.
ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್‌ನ ಮಹಾ ಪ್ರಬಂಧಕ ವೈ.ವಿ.ಬಾಲಚಂದ್ರ, ಮುರಳೀಧರ ಕೃಷ್ಣ ರಾವ್, ಡಿಜಿಎಂಗಳಾದ ರವೀಂದ್ರ ನಾಥ ಹಂದೆ, ಎಜಿಎಂ ವಿನಯ ಭಟ್ ಮೊದಲಾದವರು ಉಪಸ್ಥಿತರಿದ್ದರು.