ಕೆ.ಐ.ಸಿ. ಗ್ರ್ಯಾಂಡ್ ಇಫ್ತಾರ್ ಕಾರ್ಯಕ್ರಮದ ಸಮಾಲೋಚನೆ ಸಭೆ ಮತ್ತು ಆಮಂತ್ರಣ ಬಿಡುಗಡೆ

ದುಬೈ, ಮೇ 6: ಕೆಐಸಿ ಕೇಂದ್ರ ಸಮಿತಿ ಇದರ ಅಧೀನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕೆ.ಐ.ಸಿ ಇಫ್ತಾರ್ ಕೂಟ ಜೂನ್ 23ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮಾಲೋಚನೆ ಸಭೆ ಮತ್ತು ಆಮಂತ್ರಣ ಬಿಡುಗಡೆ ಕೆ.ಐ.ಸಿ ದುಬೈ ಅಧ್ಯಕ್ಷ ಅಶ್ರಫ್ ಖಾನ್ ಅಧ್ಯಕ್ಷತೆಯಲ್ಲಿ ದುಬೈ ಮೌಂಟ್ ರೋಯಲ್ ಹೋಟೆಲ್ ನಲ್ಲಿ ನಡೆಯಿತು.
ಕೆ.ಐ.ಸಿ. ಗ್ರ್ಯಾಂಡ್ ಇಫ್ತಾರ್ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ಶರೀಫ್ ಕೊಡಿನೀರು ಸ್ವಾಗತಿಸಿದರು. ಅಶ್ರಫ್ ಖಾನ್ ಮಾಂತೂರು ಕಾರ್ಯಕ್ರಮ ನಿರ್ವಹಣೆಯ ವಿಷಯವನ್ನು ಪ್ರಸ್ತಾಪಿಸಿದರು.
ಕಾರ್ಯಕ್ರಮವು ದುಬೈ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಅಂಜದಿ ಉಸ್ತಾದರ ಉಸ್ತುವಾರಿಯಲ್ಲಿ ಆಧ್ಯಾತ್ಮಕ ಮಜ್ಲಿಸ್ ನೊಂದಿಗೆ ಆರಂಭವಾಗಲಿದ್ದು, ಕಾರ್ಯಕ್ರಮದ ನಿರ್ವಹಣೆಗಾಗಿ ಯೋಜನಾ ಮತ್ತು ಪ್ರಚಾರದ ಸ್ವಾಗತ ಸಮಿತಿಯನ್ನು ವಿಸ್ತರಿಸಲಾಯಿತು
ಸಭೆಯಲ್ಲಿ ಕೆ.ಐ.ಸಿ ದುಬೈ ಸಮಿತಿಯ ಗೌರವಾಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ, ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ರಝಾಕ್ ಸೋಂಪಾಡಿ, ಕಾರ್ಯಾಧ್ಯಕ್ಷ ಮುಹಮ್ಮದ್ ರಫೀಕ್ ಆತೂರು, ದುಬೈ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಅಂಜದಿ ಮೊದಲಾದವರು ಮಾತನಾಡಿದರು.
ಸಭೆಯಲ್ಲಿ ಕೇಂದ್ರ ಮತ್ತು ಅಧೀನ ಸಮಿತಿಗಳ ಪದಾಧಿಕಾರಿಗಳಾದ ಅಬ್ಬಾಸ್ ಕೇಕುಡೆ, ಅಬ್ದುಲ್ ಸಲಾಮ್ ಬಪ್ಪಳಿಗೆ, ಅಶ್ರಫ್ ಆರ್ತಿಗೆರೆ, ಅನ್ವರ್ ಮಣಿಲ, ನವಾಝ್ ಬಿ.ಸಿ.ರೋಡ್, ಅಝೀಝ್ ಸೋಂಪಾಡಿ, ಆಸಿಫ್ ಮರೀಲ್, ಹಮೀದ್ ಮಣಿಲ, ಉಮ್ಮರ್ ರೆಂಜಲಾಡಿ, ಸಲೀಂ ಬರೆಪ್ಪಾಡಿ, ಹಾರಿಸ್ ಪಾಪೆತಡ್ಕ, ಅಶ್ರಫ್ ಪರ್ಲಡ್ಕ, ಉಸ್ಮಾನ್ ಮರೀಲ್ ಮೊದಲಾದವರು ಉಪಸ್ತಿತರಿದ್ದರು.







