ಕುರ್‌ಆನ್ ಎಲ್ಲರಿಗೂ ಮಾರ್ಗದರ್ಶಿ: ನೌಶಾದ್ ಕಾಕವೈಲ್
ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನ

ಮಂಗಳೂರು, ಮೇ 6: ಪವಿತ್ರ ಕುರ್‌ಆನ್ ಮುಸ್ಲಿಮರಿಗೆ ಮಾತ್ರ ಮೀಸಲಾದ ಗ್ರಂಥವಲ್ಲ. ಅದು ಸಕಲ ಮಾನವರ ಮಾರ್ಗದರ್ಶನವಾಗಿ ಸೃಷ್ಟಿಕರ್ತನಿಂದ ಅವತೀರ್ಣಗೊಂಡ ದೇವಗ್ರಂಥಗಳ ಕೊನೆಯ ಅವತರಣಿಕೆಯಾಗಿದೆ ಎಂದು ಖ್ಯಾತ ಕುರ್‌ಆನ್ ತಜ್ವೀದ್ ಪಂಡಿತ ಮೌಲವಿ ನೌಶಾದ್ ಕಾಕವೈಲ್ ನುಡಿದರು.
ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ‘ಕುರ್‌ಆನ್‌ನ ಕರೆ ಸಾರ್ವಜನಿಕ ಸಂದೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್ಕೆಎಸ್ಸೆಮ್ ಕೇಂದ್ರೀಯ ಮಂಡಳಿ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಮತ್ತು ಕರ್ನಾಟಕ ಸಲಫಿ ಫೆಡರೇಶನ್‌ನ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಬಶೀರ್ ಸಾಗರ್ ಮುಖ್ಯ ಅತಿಥಿಗಳಾಗಿದ್ದರು.
ಎಸ್ಕೆಎಸ್ಸೆಮ್ ಯೂತ್ ವಿಂಗ್ ಅಧ್ಯಕ್ಷ ಶಿಹಾಬ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಯೂತ್ ವಿಂಗ್ ಕಾರ್ಯದರ್ಶಿ ಸಿರಾಜ್ ತಲಪಾಡಿ ಸ್ವಾಗತಿಸಿದರು. ಮುಹಮ್ಮದ್ ಆತಿಶ್ ಕಣ್ಣೂರು ವಂದಿಸಿದರು.