ಐಪಿಎಲ್‌ನಿಂದ ಮೆಕಲಮ್ ಹೊರಕ್ಕೆ

ರಾಜ್‌ಕೋಟ್, ಮೇ 6: ಸ್ನಾಯು ಸೆಳೆತದಿಂದ ಬಳಲುತ್ತಿರುವ ಗುಜರಾತ್ ಲಯನ್ಸ್ ತಂಡದ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಗುರುವಾರ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ಮೆಕಲಮ್‌ಗೆ ಗಾಯಗೊಂಡಿದ್ದರು.
ಸತತ ಸೋಲಿನಿಂದ ಕಂಗಾಲಾಗಿರುವ ಗುಜರಾತ್ ತಂಡ ಈಗಾಗಲೇ ಐಪಿಎಲ್ ಟೂರ್ನಿಯ ಸ್ಪರ್ಧೆಯಿಂದ ಹೊರ ನಡೆದಿದೆ. ಈ ವರ್ಷ ಇನ್ನೂ ಮೂರು ಪಂದ್ಯಗಳನ್ನಾಡಲು ಬಾಕಿಯಿದೆ. ಮೆಕಲಮ್‌ರಿಂದ ತೆರವಾದ ಸ್ಥಾನಕ್ಕೆ ಯಾವ ಆಟಗಾರನನ್ನೂ ಆಯ್ಕೆ ಮಾಡಲಾಗಿಲ್ಲ. ಮೆಕಲಮ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗುಜರಾತ್ ತಂಡದಲ್ಲೀಗ ನಾಲ್ವರು ವಿದೇಶಿ ಆಟಗಾರರಿದ್ದಾರೆ.
ಅವರೆಂದರೆ ಜೇಮ್ಸ್ ಫಾಕ್ನರ್, ಆ್ಯರೊನ್ ಫಿಂಚ್, ಚಿರಾಗ್ ಸೂರಿ. ಡ್ವೆಯ್ನೆ ಬ್ರಾವೊ ಹಾಗೂ ಆ್ಯಂಡ್ರೂ ಟೈ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಮೆಕಲಮ್ ಈ ವರ್ಷದ ಐಪಿಎಲ್‌ನಲ್ಲಿ ಆಡಿರುವ 11 ಪಂದ್ಯಗಳ ಪೈಕಿ ಒಟ್ಟು 319 ರನ್ ಗಳಿಸಿದ್ದಾರೆ.
Next Story





