ಕೃಷಿ ರಂಗ ಮಕ್ಕಳ ಬೇಸಿಗೆ ಶಿಬಿರ
ಮಂಗಳೂರು, ಮೇ 6: ಕೃಷಿ ವಿಜ್ಞಾನ ಕೇಂದ್ರ, ಪ್ರೊಫೇಷನಲ್ ಫಿಶರೀಸ್ ಗ್ರಾಜುಯೇಟ್ಸ್ ೆರಂ, ಮುಂಬಯಿ, ಸ್ಕ್ಯೂಬ ಸಾಂಸ್ಕೃತಿಕ ತಂಡ, ಮೀನುಗಾರಿಕೆ ಮಹಾವಿದ್ಯಾಲಯ ಮತ್ತು ಸಂಕೇತ ವತಿಯಿಂದ ಮೇ 11ರಿಂದ 15, ರವರೆಗೆ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸಲು ‘ಕೃಷಿರಂಗ-2017’ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಹೈನುಗಾರಿಕೆ, ಕೋಳಿಸಾಕಣೆ, ಕೃಷಿ, ಅಲಂಕಾರಿಕ ಮೀನು ಸಾಕಣೆ, ವೈಜ್ಞಾನಿಕ ಚಲನಚಿತ್ರ ವೀಕ್ಷಣೆ ಮತ್ತು ರಂಗ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಗುವುದು.
ಶಿಬಿರವು ಮೀನುಗಾರಿಕೆ ಮಹಾವಿದ್ಯಾನಿಲಯದ ಆವರಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಆಸಕ್ತರು ಡಾ.ಅಣ್ಣಪ್ಪ ಸ್ವಾಮಿ( ಮೊ. 8904114662, 900710578)ರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಕೇವಲ 50 ವಿದ್ಯಾರ್ಥಿಗಳಿಗೆ ಮಾತ್ರ ಮೊದಲ ಬ್ಯಾಚ್ ನಲ್ಲಿ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story