Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾಭಾರತಿವಾರ್ತಾಭಾರತಿ7 May 2017 12:13 AM IST
share
ದಿಲ್ಲಿ ದರ್ಬಾರ್

ಸಕ್ರಿಯ ಸೋನಿಯಾ!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿರಬಹುದು. ಆದರೆ ಕಾಂಗ್ರೆಸ್‌ನ ಈ ಮುತ್ಸದ್ಧಿ ನಾಯಕಿ ಸಕ್ರಿಯ ರಾಜಕೀಯದಿಂದ ನಿವೃತ್ತರಾಗುವ ಸೂಚನೆ ಕಾಣಿಸುತ್ತಿಲ್ಲ. ಇದಲ್ಲದೆ, ಮುಂಬರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಸಂಯುಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಸ್ತಾವವನ್ನೂ ಅವರು ಮುಂದಿಟ್ಟಿದ್ದಾರೆ. ನಿತೀಶ್ ಕುಮಾರ್ ಹಾಗೂ ಶರದ್ ಪವಾರ್ ಜತೆ ಮಾತುಕತೆ ನಡೆಸಿದ ಬಳಿಕ ಸೋನಿಯಾ ಗಾಂಧಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರ ಬಳಿಗೆ ಒಬ್ಬ ರಾಯಭಾರಿಯನ್ನೂ ಕಳುಹಿಸಿದ್ದಾರೆ ಎನ್ನಲಾಗಿದೆ. ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಹಾಗೂ ಎಐಎಡಿಎಂಕೆ ಮುಖಂಡರ ಜತೆಯೂ ಸೋನಿಯಾ ಸಂಪರ್ಕದಲ್ಲಿದ್ದಾರೆ. ಸೋನಿಯಾ ಪ್ರಯತ್ನಗಳು ಫಲ ನೀಡಿ, ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದರೆ, ಆಡಳಿತಾರೂಢ ಮೈತ್ರಿಕೂಟ, ಸಂಪೂರ್ಣ ಬಹುಮತ ಪಡೆಯಲು ಅಗತ್ಯವಾದ 20 ಸಾವಿರ ಮತಗಳ ಕೊರತೆ ತುಂಬಿಕೊಳ್ಳಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ. ಸೋನಿಯಾ ಅವರ ಅತಿಕ್ರಿಯಾಶೀಲತೆಯು ರಾಹುಲ್‌ಗಾಂಧಿಯವರ ನಾಯಕತ್ವ ಗುಣದ ಮೇಲಿನ ಅಭಿಪ್ರಾಯ ಎಂದು ಪರಿಗಣಿಸಬೇಕು ಎಂದು ಕೆಲವರು ಅಭಿಪ್ರಾಯಡುತ್ತಾರೆ.

ಮಮತಾ ಮಂದಿ ಮತ್ತು ಬಿಜೆಪಿ
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಅಡುಗೆ ಸಿದ್ಧಪಡಿಸಿದ್ದ ಒಂದು ಕುಟುಂಬವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಹಸ್ಯವಾಗಿ ಭೇಟಿಯಾಗಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಈಗಾಗಲೇ ಗಂಭೀರ ಪ್ರಯತ್ನ ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಬೇರೂರಲು ಸಾಧ್ಯವಿರುವ ಎಲ್ಲ ಮಾರ್ಗವನ್ನೂ ಅನುಸರಿಸುತ್ತಿದ್ದಾರೆ. ಹಲವು ಅವಕಾಶದ ಬಾಗಿಲುಗಳನ್ನು ಅವರು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿಗೆ ಇರುವ ದೊಡ್ಡ ಲೋಪ ಎಂದರೆ ರಾಜ್ಯಮಟ್ಟದ ನಾಯಕರ ಕೊರತೆ. ಹಲವು ಮಂದಿ ತೃಣಮೂಲ ಕಾಂಗ್ರೆಸ್ ನಾಯಕರು ಆರೋಪಿಗಳಾಗಿರುವ ನಾರದ ಟೇಪ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿರುವುದು ಬಿಜೆಪಿಗೆ ಒಂದಷ್ಟು ಲಾಭ ತಂದುಕೊಡಬಹುದು. ಸಹಜವಾಗಿಯೇ ನಾರದ ಟೇಪ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಹಲವು ಮಂದಿ ಟಿಎಂಸಿ ಮುಖಂಡರು ದಿಲ್ಲಿ ಮತ್ತು ಲಕ್ನೊದಲ್ಲಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ, ‘‘ನಮ್ಮನ್ನು ಸಿಬಿಐ ಕುಣಿಕೆಯಿಂದ ಬಚಾವ್ ಮಾಡಿದರೆ ಬಿಜೆಪಿ ಸೇರಲೂ ಸಿದ್ಧ’’ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸಿಬಿಐ ಎನ್ನುವುದು ಸರಕಾರದ ಪಂಜರದ ಗಿಣಿಯಾಗಿರುವ ಹಿನ್ನೆಲೆಯಲ್ಲಿ, ಬಿಜೆಪಿ ಚುನಾವಣೆಗೆ ಮುಂಚಿತವಾಗಿ ಕೆಲ ಟಿಎಂಸಿ ಮುಖಂಡರನ್ನು ತೆಕ್ಕೆಗೆ ಸೆಳೆದುಕೊಳ್ಳುವ ಮಾರ್ಗವನ್ನೂ ಮುಕ್ತವಾಗಿ ಇರಿಸಿಕೊಳ್ಳಬಹುದಾಗಿದೆ. ಇದಕ್ಕೆ ಪ್ರತಿಯಾಗಿ ದೀದಿ ಏನು ಮಾಡುತ್ತಾರೆ ಎಂದು ಕಾದು ನೋಡಬೇಕು.

ಮಾಕನ್‌ರ ದಿಲ್ಲಿ ದ್ವಂದ್ವ
ದಿಲ್ಲಿ ಪಾಲಿಕೆ ಚುನಾವಣೆಯಲ್ಲಿ ಪಕ್ಷ ಧೂಳೀಪಟವಾದ ಬಳಿಕ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಾಕನ್ ರಾಜೀನಾಮೆ ನೀಡಿದಾಗ, ಹಲವು ಮಂದಿ ಕಾಂಗ್ರೆಸ್ಸಿಗರು ಅದನ್ನು ಲಘುವಾಗಿ ಪರಿಗಣಿಸಿದರು.
ಆದಾಗ್ಯೂ ಮಾಕನ್ ಹಾಗೂ ಎಐಸಿಸಿ ಉಸ್ತುವಾರಿ ಪಿ.ಸಿ.ಚಾಕೊ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧವಾಗಿಯೇ ಉಳಿದರು. ಪಕ್ಷದ ವೈಫಲ್ಯಕ್ಕೆ ನಾವೇ ಕಾರಣ ಎಂದು ಹೇಳಿಕೊಂಡರು. ಆದರೆ ರಾಹುಲ್ ಗಾಂಧಿಯವರು ಈ ಇಬ್ಬರು ಮುಖಂಡರಿಗೆ ತಮ್ಮ ಹುದ್ದೆಗಳಲ್ಲಿ ಮುಂದುವರಿಯುವಂತೆ ಸೂಚಿಸಿದರು ಹಾಗೂ ಪಕ್ಷದ ಸಾಧನೆ, ಕಳೆದ ಬಾರಿಗೆ ಹೋಲಿಸಿದರೆ ಉತ್ತಮವಾಗಿದೆ. ಆದ್ದರಿಂದ ಒಳ್ಳೆಯ ಕೆಲಸ ಮುಂದುವರಿಸಿ ಎಂದು ಫರ್ಮಾನು ಹೊರಡಿಸಿದರು. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಇತರ ಕೆಲ ಹಿರಿಯ ಮುಖಂಡರಿಂದ ಟೀಕೆಗೆ ಒಳಗಾಗಿದ್ದ ಮಾಕನ್, ಸ್ವಲ್ಪಕಾಲ ತಣ್ಣಗಾಗಿಯೇ ಇರಲು ನಿರ್ಧರಿಸಿದ್ದರು. ಒಂದು ಕಾಲದಲ್ಲಿ ದಿಲ್ಲಿಯ ಮುಖ್ಯಮಂತ್ರಿ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದ ಮಾಕನ್, ಈಗಲೂ ದಿಲ್ಲಿಯ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಸುಲಲಿತವಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಮಾಕನ್ ಮತ್ತೆ ತಮ್ಮ ಹೊಣೆ ಹೊತ್ತುಕೊಂಡರು. ಇದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದಾಗ, ‘‘ಈ ಹುದ್ದೆಯಲ್ಲಿ ತಮ್ಮನ್ನು ಮುಂದುವರಿಸುತ್ತಿರುವುದು ಪಕ್ಷದ ನಿರ್ಧಾರ. ದಿಲ್ಲಿಯಲ್ಲೇ ಕಠಿಣವಾಗಿ ಶ್ರಮಿಸುತ್ತೇನೆ’’ ಎಂದು ಹೇಳಿದರು. ಸುಲಲಿತವಾಗಿ ಪಕ್ಷ ಮುನ್ನಡೆಸಿಕೊಂಡು ಹೋಗುವ ಮಾಕನ್ ತಮ್ಮ ಮೌಲ್ಯವನ್ನು ನಿರೂಪಿಸಬೇಕಾಗಿದೆ.

ಖುರ್ಷಿದ್‌ರ ನಿರೀಕ್ಷೆ!
ಉತ್ತರ ಪ್ರದೇಶ ಮುಖ್ಯಮಂತ್ರಿ ಪವಾಡ ಮಾಡುತ್ತಿದ್ದಾರೆ. ಅವರ ಬೆಂಬಲಿಗರು ಹೇಳುವ ಪ್ರಕಾರ ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿ ರಾಜ್ಯದಲ್ಲಿ ಗಣನೀಯವಾಗಿ ಸುಧಾರಿಸಿದೆ. ಆದರೆ ಈ ಸುಧಾರಣೆಗೆ ಪೊಲೀಸರು ಕಾರಣವೇ ಅಥವಾ ವಿಚಕ್ಷಣಾ ವ್ಯವಸ್ಥೆ ಕಾರಣವೇ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಈ ಸುಧಾರಣೆಗಳು ಸಲ್ಮಾನ್ ಖುರ್ಷಿದ್ ಅವರ ಹೃದಯದಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿವೆ. ಈ ಕುತೂಹಲಕಾರಿ ಕಥೆ ಹೀಗಿದೆ. ಖೈಮ್‌ಗಂಜ್‌ನ ಅವರ ನಿವಾಸದಿಂದ ಒಂದು ನಾಯಿ ಕಳವಾಯಿತು. ಈ ವಿಚಾರ ಖುರ್ಷಿದ್ ಗಮನಕ್ಕೆ ಬಂದದ್ದು ವಿಚಿತ್ರ ರೀತಿಯಲ್ಲಿ. ಅವರು ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದಾಗ, ವಿದೇಶಾಂಗ ಖಾತೆಯ ಮಾಜಿ ಸಚಿವರ ಮನೆಯಲ್ಲಿ ನಾಯಿ ಕಳ್ಳತನವಾಗಿರುವ ಸುದ್ದಿಯನ್ನು ಟಿವಿಯಲ್ಲಿ ನೋಡಿದರು. ಮೊದಲು ಖುರ್ಷಿದ್ ಅವರಿಗೆ, ತಮ್ಮ ಪೂರ್ವಿಕರ ಮನೆಯಾದ ಫರೀದಾಬಾದ್ ನಿವಾಸದಲ್ಲಿ ಕಳ್ಳತನವಾಗಿದೆ ಎನ್ನುವುದು ಗಮನಕ್ಕೆ ಬರಲಿಲ್ಲ. ಘಟನೆಯ ಬಗ್ಗೆ ಅವರು ವಿಚಾರಿಸಿದಾಗ, ಅವರ ನಾಯಿ ನಾಪತ್ತೆಯಾಗಿರುವುದು ತಿಳಿದುಬಂತು. ಶ್ವಾನಗಳ ಬಗ್ಗೆ ವಿಶೇಷ ಕಾಳಜಿ ಹಾಗೂ ಪ್ರೀತಿಗೆ ಖುರ್ಷಿದ್ ಹೆಸರಾದವರು. ನಿಜವಾದ ಮಾಲಕನಿಗೆ ತಪ್ಪಿಸಿಕೊಂಡ ನಾಯಿಯನ್ನು ದೊರಕಿಸಿಕೊಡುವಲ್ಲಿ ಆದಿತ್ಯನಾಥ್ ನೆರವಾಗುತ್ತಾರೆ ಎಂಬ ನಿರೀಕ್ಷೆ ಖುರ್ಷಿದ್ ಅವರದ್ದು.

ವಿಶ್ವಾಸ ಅಥವಾ ಅ-ವಿಶ್ವಾಸ
ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ, ಕುಮಾರ್ ವಿಶ್ವಾಸ್ ಅವರ ಪರವಾಗಿ ನಿಂತು, ಅವರನ್ನು ಸದ್ಯಕ್ಕೆ ಪಕ್ಷದಲ್ಲಿ ಉಳಿಸಿಕೊಂಡಿದೆ. ತಮ್ಮ ಪ್ರತಿಸ್ಪರ್ಧಿ ವಿರುದ್ಧ ತನಿಖೆಗೆ ಆಗ್ರಹಿಸಿದ್ದ ವಿಶ್ವಾಸ್ ಅವರಿಗೆ ರಾಜಸ್ಥಾನದ ಹೊಣೆಗಾರಿಕೆ ನೀಡಲಾಗಿದೆ. ಈ ಮಹತ್ವದ ನಿರ್ಧಾರವನ್ನು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪಕ್ಷದ ಅತ್ಯುನ್ನತ ವ್ಯವಸ್ಥೆಯಾದ ಈ ಸಮಿತಿ, ವಿಶ್ವಾಸ್ ಅವರನ್ನು ಆರೆಸ್ಸೆಸ್ ಏಜೆಂಟ್ ಎಂದು ಕರೆದಿದ್ದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ವಿಶ್ವಾಸ್ ಅವರಿಗೆ ರಾಜಸ್ಥಾನದ ಉಸ್ತುವಾರಿ ನೀಡಲಾಗಿದೆ. ದಿಲ್ಲಿ ಚುನಾವಣೆ ಸೋಲಿಗಾಗಿ ಮತಯಂತ್ರವನ್ನು ದೂಷಿಸಿದ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನೇ ಟೀಕಿಸಿದ ವಿಶ್ವಾಸ್ ಅವರಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜಸ್ಥಾನ ನಿಜವಾಗಿ ಪರೀಕ್ಷಾಕಣ. ರಾಜಸ್ಥಾನದಲ್ಲಿ ಪಕ್ಷಕ್ಕೆ ಅಷ್ಟೊಂದು ಪ್ರಬಲವಾದ ಜಾಲ ಇಲ್ಲದ ಕಾರಣ ಇದು ವಿಶ್ವಾಸ್ ಅವರಿಗೆ ನಿಜವಾದ ಅಗ್ನಿಪರೀಕ್ಷೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಕೊಲ್ಲುವ ಕೇಜ್ರಿವಾಲ್ ತಂತ್ರಗಾರಿಕೆಯನ್ನು ಪಕ್ಷದ ಕೆಲವರು ಶ್ಲಾಘಿಸುತ್ತಿದ್ದಾರೆ. ವಿಶ್ವಾಸ್ ಅವರನ್ನು ಪಕ್ಷದಲ್ಲಿ ಉಳಿಸಿಕೊಂಡೇ, ಅವರ ಜೀವನ ಕಠಿಣವಾಗುವಂತೆ ಮಾಡಿದ್ದಾರೆ.!

share
ವಾರ್ತಾಭಾರತಿ
ವಾರ್ತಾಭಾರತಿ
Next Story
X