ಪತಿಯ ಮುಂದೆಯೇ 8 ಮಂದಿಯಿಂದ ಪತ್ನಿಯ ಸಾಮೂಹಿಕ ಅತ್ಯಾಚಾರ

ಝಾಂಸಿ, ಮೇ 7: ಪತಿಯನ್ನು ಕಟ್ಟಿಹಾಕಿ ಆತನ ಮುಂದೆಯೇ ಪತ್ನಿಯನ್ನು 8 ಜನರು ಸಾಮೂಹಿಕವಾಗಿ ಅತ್ಯಾಚಾರಗೈದ ಪೈಶಾಚಿಕ ಘಟನೆ ಜಲೌನ್ ಜಿಲ್ಲೆಯಲ್ಲಿ ನಡೆದಿದೆ.
ಜೈಪುರದಲ್ಲಿ ಕೆಲಸ ಮಾಡುತ್ತಿದ್ದ ಜಲೌನ್ ನಿವಾಸಿಗಳಾದ ದಂಪತಿ ರೈಲಿನ ಮೂಲಕ ಔರಯಾ ತಲುಪಿದ್ದರು. ಈ ವೇಳೆ ಮಧ್ಯರಾತ್ರಿಯಾಗಿತ್ತು. ಮನೆಗೆ ತಲುಪಲು ಟ್ಯಾಕ್ಸಿಗಾಗಿ ಕಾಯುತ್ತಿದ್ದು, ಈ ಸಂದರ್ಭ ಬಂದ ವಾಹನವೊಂದರ ಡ್ರೈವರ್ ಲಿಫ್ಟ್ ಕೊಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ತದನಂತರ ಮದ್ಯದಂಗಡಿಯೊಂದರ ಸಮೀಪ ಕಾರನ್ನು ನಿಲ್ಲಿಸಿದ್ದು, ಉಳಿದ 8 ಮಂದಿ ಕಾರಗೆ ಹತ್ತಿದ್ದರು. ನಂತರ ಕಾರು ಜಲೌನ್ ತಲುಪಿದಾಗ ಮಹಿಳೆಯ ಪತಿಯನ್ನು ಕಟ್ಟಿಹಾಕಿದ ದುಷ್ಕರ್ಮಿಗಳು ಆಕೆಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದ್ದಲ್ಲದೆ, ದಂಪತಿಯ ಬಳಿಯಿದ್ದ ಹಣ, ಸೊತ್ತುಗಳನ್ನು ದೋಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ದಂಪತಿಯನ್ನು ಹೆದ್ದಾರಿಯಲ್ಲಿ ಎಸೆದುಹೋಗಿದ್ದಾರೆ. ಹೇಗೋ ಕಷ್ಟಪಟ್ಟು ಸುಮಾರು 3 ಗಂಟೆಯ ಸುಮಾರಿಗೆ ಜಲೌನ್ ಪೊಲೀಸರನ್ನು ತಲುಪಿದ ದಂಪತಿ ಎಫ್ ಐಆರ್ ದಾಖಲಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.





