ಇತಿಹಾಸ ಸೃಷ್ಟಿಸಿದ ‘ಬಾಹುಬಲಿ 2’ : 1,000 ಕೋ.ರೂ.ಕ್ಲಬ್‌ಗೆ ಸೇರಿದ ಮೊದಲ ಭಾರತೀಯ ಸಿನೆಮಾ

ಹೊಸದಿಲ್ಲಿ,ಮೇ 7: ಎ.28ರಂದು ವಿಶ್ವಾದ್ಯಂತ ಬಿಡುಗಡೆಗೊಂಡಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿಯವರ ‘ಬಾಹುಬಲಿ 2’ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಇತಿಹಾಸ ಸೃಷ್ಟಿಸುತ್ತಿದೆ. 1,000 ಕೋ.ರೂ.ಗಳಿಸುವ ಮೂಲಕ ಇಂತಹ ಸಾಧನೆ ಮಾಡಿದ ಮೊದಲ ಭಾರತೀಯ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಮಿಳು,ತೆಲುಗು,ಮಲಯಾಳಂ,ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣ ಗೊಂಡಿರುವ ‘ಬಾಹುಬಲಿ 2’ ಭಾರತದಾದ್ಯಂತ 8,000 ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಿದ್ದು, ಸ್ವದೇಶದಲ್ಲಿ 800 ಕೋ.ರೂ.ಗೂ ಅಧಿಕ ಮತ್ತು ವಿದೇಶಗಳಲ್ಲಿ 200 ಕೋ.ರೂ.ಗೂ ಹೆಚ್ಚಿನ ಆದಾಯವನ್ನು ಸಂಗ್ರಹಿಸಿದೆ ಎಂದು ಟ್ರೇಡ್ ಅನಾಲಿಸ್ಟ್ ರಮೇಶ ಬಾಲಾ ವರದಿ ಮಾಡಿದ್ದಾರೆ. ಬಿಡುಗಡೆಯಾದ ದಿನವೇ ಚಿತ್ರವು ಎಲ್ಲ ಭಾಷೆಗಳಲ್ಲಿ ಸೇರಿ 100 ಕೋ.ರೂ.ಗೂ ಅಧಿಕ ಆದಾಯ ಗಳಿಸಿದ್ದು, ಮೊದಲ ವಾರಾಂತ್ಯದಲ್ಲಿ ಗಳಿಕೆ ಮೊತ್ತ 300 ಕೋರೂ.ಗಳನ್ನು ದಾಟಿತ್ತು.
Next Story





