ಕಪಿಲ್ ಶರ್ಮ ಆರೋಪ ಅಸಂಬದ್ಧ: ಸಿಸೋಡಿಯಾ

ಹೊಸದಿಲ್ಲಿ, ಮೇ 7:ಮಾಜಿ ಸಚಿವ ಕಪಿಲ್ ಶರ್ಮ ಅವರು ದಿಲ್ಲಿಯ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಡಿರುವ ಆರೋಪ ಅಸಂಬದ್ಧ ಮತ್ತು ಕೆಳಮಟ್ಟದ್ದು ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಸತ್ಯೇಂದ್ರ ಜೈನ್ ಅವರಿಂದ ದಿಲ್ಲಿಯ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಕಪಿಲ್ ಶರ್ಮ ಎರಡು ಕೋಟಿ ರೂ. ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಅವರು "ಇಂತಹ ಆರೋಪದ ಬಗ್ಗೆ ನಾನೇನು ಹೇಳಲಿ ?. ಇದು ಅತ್ಯಂತ ಕೆಳಮಟ್ಟದ ಆರೋಪ ” ಎಂದು ಹೇಳಿದರು.
ನೀರು ಪೂರೈಕೆಯ ವ್ಯವಸ್ಥೆಯ ವೈಫಲ್ಯದ ಹಿನ್ನೆಲೆಯಲ್ಲಿ ಮಿಶ್ರಾ ಅವರನ್ನು ಜಲ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ನೀರು ಪೂರೈಕೆಯ ವ್ಯವಸ್ಥೆಯ ವೈಫಲ್ಯದ ಹಲವು ಮಂದಿ ಸಚಿವರು ಅತೃಪ್ತಿಗೊಂಡಿದ್ದರು.ಈ ಕಾರಣದಿಂದಾಗಿ ಮುಖ್ಯ ಮಂತ್ರಿ ಕೇಜ್ರಿವಾಲ್ ಸಂಪುಟ ಪುನರ್ರಚನೆ ಮಾಡಲು ಬಯಸಿದ್ದರು ಎಂದರು.
Next Story





