Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಇದೆಂತಹಾ ದುಸ್ಸಾಹಸ ಅಂತೀರಾ!

ಇದೆಂತಹಾ ದುಸ್ಸಾಹಸ ಅಂತೀರಾ!

ವೈರಲ್ ವೀಡಿಯೊ

ವಾರ್ತಾಭಾರತಿವಾರ್ತಾಭಾರತಿ7 May 2017 5:11 PM IST
share
ಇದೆಂತಹಾ ದುಸ್ಸಾಹಸ ಅಂತೀರಾ!

ಮಂಗಳೂರು, ಮೇ 7: ನಿಜಕ್ಕೂ ಆ ವಿಡಿಯೋ ನೋಡಿದಾದ ಎದೆ ಝಲ್ಲೆನಿಸುತ್ತದೆ. ಕೇವಲ ಒಂದು ಕೋಳಿಗಾಗಿ ಬಾಲಕನೊಬ್ಬನನ್ನು ಬಾವಿಗಿಳಿಸುವ ದೃಶ್ಯ ಆ ವೀಡಿಯೋದ್ದು. ತುಳುವಿನಲ್ಲಿ ಸಂಭಾಷಣೆಯಲ್ಲಿರುವ ಆ ವೀಡಿಯೋ ದ.ಕ. ಜಿಲ್ಲೆಯಲ್ಲಿ ನಡೆದ ಘಟನೆಯ ಚಿತ್ರೀಕರಣವೆಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

ಆದರೆ ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದು ಮಾತ್ರ ಸ್ಪಷ್ಟವಿಲ್ಲ. ಈ ವೀಡಿಯೋ ಸದ್ಯ ವೈರಲ್ ಆಗಿದ್ದು, 'ಬಾವಿಗೆ ಬಿದ್ದ ಕೋಳಿಯನ್ನು ಮೇಲೆತ್ತಲು ದ.ಕ. ಜಿಲ್ಲೆಯ ಮಹಿಳಾ ವಿಜ್ಞಾನಿಗಳಿಂದ ಹೊಸ ಸಂಶೋಧನೆ' ಎಂಬ ಒಕ್ಕಣೆಯೊಂದಿಗೆ ಈ ವೀಡಿಯೋ ಹರಿದಾಡುತ್ತಿದೆ.

ನೀರಿಲ್ಲದ ಸುಮಾರು 30 ಅಡಿಯಷ್ಟಿರಬಹುದಾದ ಬಾವಿಯೊಂದಕ್ಕೆ ಬಿದ್ದ ಕೋಳಿಯೊಂದನ್ನು ರಕ್ಷಿಸಲು ಸುಮಾರು 10 ವರ್ಷದೊಳಗಿನ ಬಾಲಕನನ್ನು ಬಾವಿಯೊಳಗೆ ಹಗ್ಗದ ಮೂಲಕ ಇಳಿ ಬಿಡುವ ದೃಶ್ಯ. ನೋಡಲು ಇದು ತಮಾಷೆಯಾಗಿ ಕಂಡು ಬರುತ್ತಿದ್ದರೂ, ಇದರ ಅಪಾಯವನ್ನು ಮಾತ್ರ ಊಹಿಸಲು ಅಸಾಧ್ಯ.

ಬಾವಿಯಿಂದ ನೀರು ಸೇದುವ ಹಗ್ಗದ ಒಂದು ತುದಿಗೆ ಅಲ್ಯುಮಿನಿಯಂ ಬಕೆಟೊಂದನ್ನು ಕಟ್ಟಿ ಆ ಬಕೆಟ್ ನೊಳಗೆ ಬಾಲಕನನ್ನು ನಿಲ್ಲಿಸಿ ಬಾವಿಯೊಳಗೆ ಇಳಿ ಬಿಡುವ ದೃಶ್ಯವದು. ಅಚ್ಚರಿ ಹಾಗೂ ಆತಂಕದ ಸಂಗತಿ ಎಂದರೆ ಆ ಬಾವಿಗೆ ಆವರಣ ಗೋಡೆಯೇ ಇದ್ದಂತಿಲ್ಲ. ಮತ್ತೂ ಒಂದು ವಿಶೇಷ ಮೂವರು ಮಹಿಳೆಯರು ಬಾವಿಯ ಒಂದು ಪಾಶ್ವಕ್ಕೆ ಹಾಕಲಾದ ಏಳೆಂಟು ಮರದ ತೆಳ್ಳನೆ ದಿಮ್ಮಿಗಳ ಮೇಲೆ ನಿಂತಿರುವುದು. ಯಾವುದೇ ರೀತಿಯ ಸುರಕ್ಷಾ ವ್ಯವಸ್ಥೆಗಳಿಲ್ಲದೆ, ಪುಟ್ಟ ಬಾಲಕ (ಆತ ಬಕೆಟ್‌ನೊಳಗೆ ನಿಂತು ಬಾವಿಗೆ ಇಳಿಸುವ ಮುನ್ನ ಕೊಂಚ ಭಯದಿಂದಲೇ ನಗುತ್ತಲೇ ಮಹಿಳೆಯರ ಜತೆ ಸಂಭಾಷಣೆ ಮಾಡುತ್ತಾನೆ. ಮಹಿಳೆಯರು ಆತನಿಗೆ ಧೈರ್ಯ ತುಂಬಿ ಇಳಿ ಬಿಡುತ್ತಾರೆ)ನನ್ನು ಬಾವಿಯೊಳಗೆ ಇಳಿ ಬಿಡುವುದು.

ಬಕೆಟ್‌ನೊಂದಿಗೆ ಬಾವಿಯ ತಳಕ್ಕೆ ತಲುಪುವ ಬಾಲಕ ಬಕೆಟ್‌ನಿಂದ ಇಳಿದು ಕೋಳಿಯನ್ನು ಹಿಡಿದು ಅದನ್ನು ಬಕೆಟ್‌ನೊಳಗೆ ತನ್ನ ಕಾಲುಗಳಲ್ಲಿ ಹಿಡಿದು ಮೇಲಕ್ಕೆ ಬರುವುದು. ಈ ದೃಶ್ಯದಲ್ಲಿ ಪುಟ್ಟ ಬಾಲಕ ಹಾಗೂ ಮೂವರು ಮಹಿಳೆಯರು, ಕೋಳಿ ಮಾತ್ರ ಕಾಣಸಿಗುತ್ತಾರೆ. ಉಳಿದಂತೆ ಮಗುವಿನ ಮಾತು ಹಾಗೂ ಪುರುಷನೊಬ್ಬನ ಸಂಭಾಷಣೆ ಕೇಳಿಬರುತ್ತದೆಯಾದರೂ ವೀಡಿಯೋದಲ್ಲಿ ಅವರು ಕಾಣಸಿಗುವುದಿಲ್ಲ.

ಈ ದೃಶ್ಯ ನೋಡುವಾಗ ಆ ಬಾಲಕನ ಧೈರ್ಯವನ್ನು ಮೆಚ್ಚಬೇಕೋ, ಅಥವಾ ಆ ಬಾಲಕನನ್ನು ಯಾವುದೇ ಸುರಕ್ಷಾ ವ್ಯವಸ್ಥೆ ಇಲ್ಲದ ಬಾವಿಯೊಳಕ್ಕೆ ಇಳಿಬಿಟ್ಟು ಇದನ್ನೆಲ್ಲಾ ಚಿತ್ರೀಕರಿಸಿದವರ ಹುಚ್ಚುತನಕ್ಕೆ ಏನನ್ನಬೇಕೋ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X