ಮುಂಬೈನ ಸಿಎಸ್‌ಟಿ,ಎಲ್ಫಿನ್‌ಸ್ಟೋನ್ ರೋಡ್ ನಿಲ್ದಾಣಗಳ ಮರುನಾಮಕರಣಕ್ಕೆ ಕೇಂದ್ರದ ಒಪ್ಪಿಗೆ

ಹೊಸದಿಲ್ಲಿ,ಮೇ 7: ಮುಂಬೈನ ಪ್ರಸಿದ್ಧ ಹೆಗ್ಗುರುತುಗಳಲ್ಲೊಂದಾಗಿರುವ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ) ಅನ್ನು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಮತ್ತು ಎಲ್ಫಿನ್‌ಸ್ಟೋನ್ ರೋಡ್ ನಿಲ್ದಾಣವನ್ನು ಪ್ರಭಾದೇವಿ ರೈಲು ನಿಲ್ದಾಣವಾಗಿ ಶೀಘ್ರವೇ ಮರು ನಾಮಕರಣಗೊಳಿಸಲಾಗುವುದು. ಮಹಾರಾಷ್ಟ್ರ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿರುವ ಈ ಶಿಫಾರಸುಗಳಿಗೆ ಕೇಂದ್ರ ಸರಕಾರವು ಶನಿವಾರ ತನ್ನ ಒಪ್ಪಿಗೆಯನ್ನು ನೀಡಿದೆ.
ಕೇಂದ್ರದ ಒಪ್ಪಿಗೆ ಪತ್ರವು ನಮಗೆ ಲಭಿಸಿದ್ದು, ರಾಜ್ಯ ಸರಕಾರವು ಮರು ನಾಮಕರಣ ಕುರಿತು ಅಧಿಸೂಚನೆಯನ್ನು ಸೋಮವಾರ ಹೊರಡಿಸಲಿದೆ. ನಂತರ ಎರಡೂ ನಿಲ್ದಾಣಗಳ ಪುನರ್‌ನಾಮಕರಣ ಸಮಾರಂಭಗಳು ನಡೆಯಲಿವೆ ಎಂದು ಸಾರಿಗೆ ಸಚಿವ ಹಾಗೂ ಶಿವಸೇನಾ ನಾಯಕ ದಿವಾಕರ ರಾವತೆ ಅವರು ಸುದ್ದಿಗಾರರಿಗೆ ತಿಳಿಸಿದರು.
Next Story





