ಫ್ರಾನ್ಸ್: ಅಧ್ಯಕ್ಷರ ಆಯ್ಕೆಗೆ ಮತದಾನ

ಪ್ಯಾರಿಸ್, ಮೇ 7: ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯ ಎರಡನೆ ಹಂತದ ಮತದಾನ ರವಿವಾರ ನಡೆದಿದ್ದು, ಮಧ್ಯಾಹ್ನದ ವೇಳೆಗೆ 28.23 ಶೇಕಡ ಮತದಾನವಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಮೊದಲ ಹಂತದ ಮತದಾನ ಎಪ್ರಿಲ್ 23ರಂದು ನಡೆದಿತ್ತು. ಆ ಚುನಾವಣೆಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಗಳಿಸಿದ ಇಬ್ಬರು ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಅಧ್ಯಕ್ಷರಾಗಿ ಆರಿಸಲು ಇಂದು ಮತದಾನ ನಡೆಯಿತು.
ಐರೋಪ್ಯ ಒಕ್ಕೂಟದ ಪರವಾಗಿರುವ ಸ್ವತಂತ್ರ ಅಭ್ಯರ್ಥಿ ಇಮಾನುಯೇಲ್ ಮ್ಯಾಕ್ರೋನ್ ಮತ್ತು ಉಗ್ರ ಬಲಪಂಥೀಯ ಅಭ್ಯರ್ಥಿ ಮರೀನ್ ಲೆ ಪೆನ್ ನಡುವೆ ಅಧ್ಯಕ್ಷ ಗಾದಿಗಾಗಿ ಸ್ಪರ್ಧೆ ನಡೆಯುತ್ತಿದೆ.
ಎಪ್ರಿಲ್ 23ರಂದುದ ನಡೆದ ಚುನಾವಣೆಯಲ್ಲಿ ಮ್ಯಾಕ್ರೋನ್ ಅಗ್ರ ಸ್ಥಾನಿಯಾಗಿ ಹೊರಹೊಮ್ಮಿದರೆ, ಲೆ ಪೆನ್ ಎರಡನೆ ಸ್ಥಾನಿಯಾಗಿದ್ದರು.
ಮ್ಯಾಕ್ರೋನ್ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಅಧಿಕ ಎಂದು ಸಮೀಕ್ಷೆಗಳು ಹೇಳಿವೆ.
Next Story





