11 ಲ.ಎಂಬಿಬಿಎಸ್,ಬಿಡಿಎಸ್ ಆಕಾಂಕ್ಷಿಗಳು ನೀಟ್‌ಗೆ ಹಾಜರು
ಹೊಸದಿಲ್ಲಿ,ಮೇ 7: ರವಿವಾರ ದೇಶಾದ್ಯಂತ 1921 ಕೇಂದ್ರಗಳಲ್ಲಿ ನಡೆದ ನೀಟ್ ಪರೀಕ್ಷೆಗೆ 1,522 ಎನ್ನಾರೈಗಳು ಮತ್ತು 613 ವಿದೇಶಿಯರು ಸೇರಿದಂತೆ ಒಟ್ಟೂ 11,38,890 ಎಂಬಿಬಿಎಸ್ ಮತ್ತು ಬಿಡಿಎಸ್ ಆಕಾಂಕ್ಷಿಗಳು ಹಾಜರಾಗಿದ್ದರು.
ಸಿಬಿಎಸ್‌ಇ 103 ನಗರಗಳಲ್ಲಿ ಹರಡಿಕೊಂಡಿದ್ದ ಈ ಕೇಂದ್ರಗಳಲ್ಲಿ ಪರೀಕ್ಷೆಯ ಉಸ್ತುವಾರಿಗಾಗಿ ತನ್ನ 490 ಅಧಿಕಾರಿಗಳನ್ನು ನಿಯೋಜಿಸಿತ್ತು. ಜೊತೆಗೆ 3,500 ವೀಕ್ಷಕರನ್ನೂ ನಿಯೋಜಿಸಲಾಗಿತ್ತು. 65,000 ಎಂಬಿಬಿಎಸ್ ಮತ್ತು 25,000 ಬಿಡಿಎಸ್ ಸ್ಥಾನಗಳಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗಿದೆ.
ಈ ಮೊದಲು ಸಿಬಿಎಸ್‌ಇ ಶೇ.15 ಅಖಿಲ ಭಾರತ ಕೋಟಾದ ಸ್ಥಾನಗಳಿಗಾಗಿ ಮಾತ್ರ ನೀಟ್ ಪರೀಕ್ಷೆಯನ್ನು ನಡೆಸುತ್ತಿತ್ತು ಮತ್ತು ಉಳಿದ ಸ್ಥಾನಗಳಿಗಾಗಿ ರಾಜ್ಯಗಳು ಪರೀಕ್ಷೆಗಳನ್ನು ನಡೆಸುತ್ತಿದ್ದವು. ಕಳೆದ ವರ್ಷದಿಂದ ಸಂಪೂರ್ಣ ಪರೀಕ್ಷೆಯ ಉಸ್ತುವಾರಿ ಸಿಬಿಎಸ್‌ಇ ಪಾಲಿಗೆ ಬಂದಿದೆ.
Next Story