ಸ್ಟೋನಿಸ್‌ಗೆ ಭುಜನೋವು: ಐಪಿಎಲ್‌ನಿಂದ ಹೊರಕ್ಕೆ

ಹೊಸದಿಲ್ಲಿ, ಮೇ 7: ಭುಜನೋವಿಗೆ ಒಳಗಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್ ಪ್ರಸ್ತುತ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯದ ಪರ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸ್ಟೋನಿಸ್ ಇತ್ತೀಚೆಗೆ ಪಂಜಾಬ್ ತಂಡ ಸದಸ್ಯರೊಂದಿಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡನ್ನು ಹಿಡಿಯಲು ಹಾರಿದ ಸಂದರ್ಭ ಭುಜಕ್ಕೆ ಗಾಯವಾಗಿದೆ.
27ರ ಹರೆಯದ ಸ್ಟೋನಿಸ್ ಈ ವರ್ಷ ಪಂಜಾಬ್ ಪರ ಐದು ಪಂದ್ಯಗಳನ್ನು ಆಡಿದ್ದು, ಕೇವಲ 17 ರನ್ ಗಳಿಸಿದ್ದಾರೆ. 2 ವಿಕೆಟ್‌ಗಳನ್ನು ಪಡೆದಿದ್ದಾರೆ.
ಸ್ಟೋನಿಸ್ ಮುಂಬರುವ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು
Next Story





