ಮ್ಯಾಡ್ರಿಡ್ ಓಪನ್: ಕೆರ್ಬರ್ ಶುಭಾರಂಭ

ಮ್ಯಾಡ್ರಿಡ್, ಮೇ 7: ವಿಶ್ವದ ನಂ.2ನೆ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಮ್ಯಾಡ್ರಿಡ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಅಗ್ರ ಶ್ರೇಯಾಂಕಿತ ಆಟಗಾರ್ತಿ ಕೆರ್ಬರ್ ಹಂಗೇರಿಯದ ಟೈಮಿಯಾ ಬಾಬೊಸ್‌ರನ್ನು 6-4, 6-2 ನೇರ ಸೆಟ್‌ಗಳಿಂದ ಮಣಿಸಿದರು.
ಕೆರ್ಬರ್ ಈ ಋತುವಿನಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಮ್ಯಾಡ್ರಿಡ್ ಓಪನ್‌ನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಎದುರಾಳಿ ಆಟಗಾರ್ತಿಯನ್ನು ನೇರ ಸೆಟ್‌ಗಳಿಂದ ಮಣಿಸಿದರು.
ರಶ್ಯದ ಆಟಗಾರ್ತಿ ಮರಿಯಾ ಶರಪೋವಾ ಡೋಪಿಂಗ್ ಪ್ರಕರಣದಲ್ಲಿ 15 ತಿಂಗಳ ನಿಷೇಧ ಎದುರಿಸಿ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದು, ರವಿವಾರ ನಡೆಯಲಿರುವ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಕ್ರೊಯೇಷಿಯದ ಮಿರ್ಜಾನಾ ಲುಸಿಕ್-ಬರೊನಿ ಅವರನ್ನು ಎದುರಿಸಲಿದ್ದಾರೆ.
Next Story





