ಜಲೀಲ್ ಕರೋಪಾಡಿ ಅನುಸ್ಮರಣೆ
ಮಂಗಳೂರು, ಮೇ 7: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಸಕ್ರಿಯ ಕಾರ್ಯಕರ್ತ, ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ಜಲೀಲ್ ಕರೋಪಾಡಿ ಅವರ ಹೆಸರಿನಲ್ಲಿ ತಹ್‌ಲೀಲ್ ಸಮರ್ಪಣೆ ಹಾಗೂ ಅನುಸ್ಮರಣಾ ಕಾರ್ಯಕ್ರಮವು ಮೇ 16ರಂದು ಬೆಳಗ್ಗೆ 9 ಗಂಟೆಗೆ ಮೂಳೂರಿನ ಮರ್ಕಝ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಡಿಕೆಎಸ್‌ಸಿ ಡೆವಲಪ್‌ಮೆಂಟ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಇಸ್ಹಾಕ್ ಬೊಳ್ಳಾಯಿ ಹಾಗೂ ಸುನ್ನಿ ಗೈಡೆನ್ಸ್ ಬ್ಯೂರೊದ ಅಧ್ಯಕ್ಷ ಮುಹಮ್ಮದ್ ಅಲ್ ಖಾಸಿಮಿ ಅಳಕೆಮಜಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





