ಕಾರ್ಮಿಕ ಸಂಘಟನೆಗಳೊಂದಿಗೆ ಕೈ ಜೋಡಿಸದಂತೆ ನೌಕರರಿಗೆ ಬೆದರಿಕೆ: ಆರೋಪ
ಬೆಂಗಳೂರು, ಮೇ 7: ಸಿದ್ಧ ಉಡುಪು ಕಾರ್ಮಿಕರು ಕಾರ್ಮಿಕ ಸಂಘಟನೆಗಳಿಗೆ ಸೇರಿಕೊಳ್ಳದಂತೆ ಕಾರ್ಖಾನೆಯ ಮಾಲಕರು ಹಾಗೂ ಆಡಳಿತಾಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಗಾರ್ಮೆಂಟ್ಸ್ ಕಾರ್ಮಿಕ ಸಂಘಟನೆಯ ಸದಸ್ಯೆ ಭಾಗ್ಯಾ ಆರೋಪಿಸಿದ್ದಾರೆ.
ರವಿವಾರ ನಗರದಲ್ಲಿ ಪಿಯುಸಿಎಲ್ ವತಿಯಿಂದ 2016ರ ಗಾರ್ಮೆಂಟ್ಸ್ ಕಾರ್ಮಿಕರ ಹೋರಾಟದ ಕುರಿತ ‘ಧಾರಾ ಮತ್ತು ಒತ್ತಡ - ಐತಿಹಾಸಿಕ ಬಂಡಾಯ’ ಸಂಶೋಧನಾ ವರದಿಯ ಬಿಡೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಮಿಕ ಸಂಘಟನೆಗಳ ನಿರಂತರವಾದ ಹೋರಾಟದಿಂದ ಮಾತ್ರ ಇವತ್ತು ಗಾರ್ಮೆಂಟ್ ನೌಕರರಿಗೆ ತಮ್ಮ ಹಕ್ಕುಗಳನ್ನು ಪಡೆದಿದ್ದಾರೆ. ಹೀಗಾಗಿ ಎಂತಹ ಪರಿಸ್ಥಿತಿ ಬಂದರೂ ಕಾರ್ಮಿಕ ಸಂಘಟನೆಗಳ ಜೊತೆಯೇ ಇದ್ದು, ಕಾರ್ಮಿಕರ ಹಿತಾಸಕ್ತಿಗಾಗಿ ಹೋರಾಟಗಳನ್ನು ನಿರಂತರವಾಗಿ ಮುಂದುವರೆಸುವುದಾಗಿ ಅವರು ಭರವಸೆ ನೀಡಿದರು.
Next Story





