ತ್ರಿದಿನ ಮತ ಪ್ರಭಾಷಣ ಹಾಗೂ ಅಭಿನಂದನಾ ಸಂಗಮ

ಉಳ್ಳಾಲ, ಮೇ 7: ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ವತಿಯಿಂದ ತ್ರಿದಿನ ಮತ ಪ್ರಭಾಷಣ ಹಾಗೂ ಅಭಿನಂದನಾ ಸಂಗಮ ಕಾರ್ಯಕ್ರಮ ಕೆ.ಸಿ.ರೋಡ್ ಜಂಕ್ಷನ್‌ನಲ್ಲಿ ನಡೆಯಿತು.
ಇನ್ಸ್ಪೈರ್ ಬ್ಲಡ್ ಡೋನರ್ಸ್ ಸೆಲ್‌ನ ಲೋಗೊವನ್ನು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಅಲ್ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅನಾವರಣಗೊಳಿಸಿದರು.
ತಲಪಾಡಿ ರೇಂಜ್ ಮಟ್ಟದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ಸೇವೆಗೈದ ಕೆ.ಹಸನಬ್ಬ ಹಾಜಿ , ಅಬ್ಬಾಸ್ ಹಾಜಿ ಪೆರಿಬೈಲ್, ಯು.ಬಿ.ಮುಹಮ್ಮದ್ ಹಾಜಿ, ಅಬ್ಬಾಸ್ ಪೂಮಣ್ಣು, ಮೂಸ ಕುಂಞಿ ಕೆ.ಎಂ., ಉಮ್ಮರ್ ಮಾಸ್ಟರ್, ಮುಹಮ್ಮದ್ ಪೂಮಣ್ಣು, ಇಸ್ಮಾಯಿಲ್ ಬಿ.ಎಚ್, ಅಬ್ದುಲ್ಲ, ಇಕ್ಬಾಲ್ ಕೆ.ಸಿ.ನಗರ, ಫಾರೂಕ್ ಕೆ.ಎಮ್, ಅಬ್ಬಾಸ್ ಹಾಜಿ, ಇಸ್ಮಾಯಿಲ್ ಹಾಜಿ ಕೊಪ್ಪಳ, ಅಬ್ದುರ್ರಝಾಕ್, ಅಹ್ಮದ್ ಕುಂಞಿ ಹಾಜಿ, ಸಿದ್ದೀಕ್ ಯು.ಪಿ, ಅಬೂಬಕ್ಕರ್ ಹಾಜಿ, ಮಜೀದ್ ಕಾಟಂಗರೆ, ಕೆ.ಬಿ.ಯಹ್ಯಾ ಮೊದಲಾದವರನ್ನು ಅಭಿನಂದಿಸಲಾಯಿತು.
ಉಸ್ಮಾನ್ ಜೌಹರಿ ನೆಲ್ಯಾಡಿ ಮುಖ್ಯ ಪ್ರಭಾಷಣ ಮಾಡಿದರು, ಅಸ್ಸೈಯದ್ ಜಮಾಲುಲೈಲಿ ತಂಙಳ್ ಕಾಜೂರು ದುಆ ನೇರವೇರಿಸಿದರು, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುರ್ರಹೀಂ ಝುಅರಿ, ಉಪಾಧ್ಯಕ್ಷ ಮುಸ್ತಫಾ ಝುಹರಿ, ಸಿ.ಟಿ.ಎಂ. ಸಲೀಂ ಅಸ್ಸಖಾಫ್ ತಂಙಳ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಸಖಾಫಿ, ಕೋಶಾಧಿಕಾರಿ ಅಬ್ದುಲ್ ಹಮೀದ್, ಡಾ.ಅಬ್ದುಲ್ ಖಾದರ್ ಹಾಜಿ, ಇನ್ಸ್ಪೈರ್ ಬ್ಲಡ್ ಡೋನರ್ಸ್ ಸೆಲ್ ಚೇರ್‌ಮೆನ್ ಅಬ್ದುಲ್ ಹಕೀಮ್ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಕಾರ್ಯದರ್ಶಿ ಶಿಹಾಬುದ್ದೀನ್ ವಂದಿಸಿದರು.