ಚೆನ್ನೈಯಲ್ಲಿ ಬೆಂಕಿ ಅವಘಡ :ಇಬ್ಬರು ಮಕ್ಕಳು ಸಹಿತ ನಾಲ್ವರು ಸಜೀವ ದಹನ

ಚೆನ್ನೈ, ಮೇ 8: ಇಂದು ಮುಂಜಾವ ನಗರದ ವಡಪಳನಿಯಲ್ಲಿನ ದಕ್ಷಿಣ ಪೆರುಮಾಳ್ ಸ್ಟ್ರೀಟಿನ ಅಪಾರ್ಟ್‌ಮೆಂಟ್ ಒಂದರ ನೆಲಮಹಡಿಯಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಜೀವ ದಹನಗೊಂಡಿದ್ದಾರೆ ಹಾಗೂ ಕಟ್ಟಡದಲ್ಲಿದ್ದ ಇತರ ಐವರು ಗಾಯಗೊಂಡಿದ್ದಾರೆ. ಶಾರ್ಟ್‌ಸರ್ಕ್ಯೂಟ್ ನಿಂದಾಗಿ ಬೆಂಕಿ ಹುಟ್ಟಿಕೊಂಡಿತೆಂದು ತಿಳಿದು ಬಂದಿದೆ.
ಘಟನೆ ಸುಮಾರು 4:45ಕ್ಕೆ ನಡೆದಿದೆ. ಕಟ್ಟಡದ ತಳಅಂತಸ್ತಿನಲ್ಲಿದ್ದ ವಿದ್ಯುತ್ ಪೆಟ್ಟಿಗೆಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಮೀನಾಕ್ಷಿ (60), ಸೆಲ್ವಿ(30), ಶಾಲಿನಿ (10) ಹಾಗೂ ಸಂಜಯ್(4) ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕಿಲ್ಪಾಕ್ ಮೆಡಿಕಲ್ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ. ಕಟ್ಟಡದ ಹೊರಗೆ ನಿಲ್ಲಿಸಲಾಗಿದ್ದ 14 ವಾಹನಗಳೂ ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ದಳಗಳು ಬೆಂಕಿ ನಂದಿಸಲು ಬಹಳಷ್ಟು ಶ್ರಮಿಸಬೇಕಾಯಿತು.
Next Story





