ಭಾರತದ ದಾಳಿಗೆ ಪಾಕ್ ನ ಬಂಕರ್ ನಾಶ

ಶ್ರೀನಗರ, ಮೇ 8: ಭಾರತದ ಸೇನೆಯು ಗಡಿ ನಿಯಂತ್ರಣಾ ರೇಖೆಯ ಬಳಿ ಆರು ಮಿಸೈಲ್ ಮೂಲಕ ನಡೆಸಿದ ದಾಳಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಎರಡು ಬಂಕರ್ ಗಳು ನಾಶವಾಗಿದೆ.
ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತ ದಾಳಿ ನಡೆಸಿದ್ದು, ಪಾಕ್‌ಗೆ ಭಾರೀ ನಷ್ಟ ಉಂಟಾಗಿದೆ.
ಕೃಷ್ಣಘಾಟ್ ಸೆಕ್ಟರ್ ಬಳಿ ಭಾರತದ ಸೇನೆ ದಾಳಿ ನಡೆಸಿ ಗಡಿಯಲ್ಲಿರುವ ಪಾಕ್ ನ ಬಂಕರ್ ಗಳನ್ನು ಧ್ವಂಸ ಮಾಡಿದೆ. ಇತ್ತೀಚೆಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿ ಭಾರತದ ಇಬ್ಬರು ಸೈನಿಕರನ್ನು ಕೊಂದು ಅವರ ಶಿರಚ್ಛೇದ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪಾಕ್ ಗೆ ಭಾರತ ದಿಟ್ಟ ಪ್ರತ್ಯುತ್ತರ ನೀಡಿದೆ ಎಂದು ತಿಳಿದು ಬಂದಿದೆ.
Next Story





