ತಮಿಳುನಾಡಿನ ಗಣಿಮಾಫಿಯಾ ಮುಖ್ಯಸ್ಥ ಶೇಖರ್ ರೆಡ್ಡಿ ಅಧಿಕಾರಿಗಳು,ರಾಜಕಾರಿಣಿಗಳಿಗೆ ನೀಡಿದ ಮೊತ್ತ ಎಷ್ಟು ಕೋಟಿ ಗೊತ್ತೆ?

ಚೆನ್ನೈ,ಮೇ 8: ಮರಳು ಗಣಿಗಾರಿಕೆ ಮಾಫಿಯ ಮುಖ್ಯಸ್ಥ ಹಾಗೂ ತಮಿಳುನಾಡಿನ ಸರಕಾರಿ ಗುತ್ತಿಗೆದಾರ ಶೇಖರ್ ರಡ್ಡಿ ತಮಿಳುನಾಡಿನ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳಿಗೆ 300ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ರೆಡ್ಡಿಯವರಿಂದ ವಶ ಪಡಿಸಿಕೊಂಡ ಡೈರಿಯಲ್ಲಿ ಸಚಿವರು,ಶಾಸಕರು , ಐಎಎಸ್ , ಐಪಿಎಸ್ ಅಧಿಕಾರಿಗಳ ಹೆಸರಿವೆ. ಒಟ್ಟು ಐವತ್ತು ಮಂದಿ ವಿರುದ್ಧ ಭ್ರಷ್ಟಾಚಾರ ವಿರೋಧಿ ಕ್ರಮಕ್ಕೆ ಆಗ್ರಹಿಸಿ ಆದಾಯ ಇಲಾಖೆ ರಾಜ್ಯಸರಕಾರದ ಮುಖ್ಯ ಕಾರ್ಯದರ್ಶಿ ಗಿರಿಜಾ ವೈದ್ಯನಾಥರಿಗೆ ಪತ್ರ ಬರೆದಿದೆ. ಮರಳು ಗಣಿಗಾರಿಕೆಯ ಮಾಲಕ, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಶೇಖರ್ ರೆಡ್ಡಿ , ಸಚಿವರು ಮತ್ತು ಇತರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿ ಕಾಂಟ್ರಾಕ್ಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ರೆಡ್ಡಿಯವರ ಮನೆಗೆ ಅದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರು ಲಂಚ ಕೊಟ್ಟ ಮೊತ್ತವನ್ನು ಬರೆದಿಟ್ಟ ಡೈರಿ, 136 ಕೋಟಿರೂಪಾಯಿ ಹಾಗೂ 177ಕೋಟಿರೂಪಾಯಿಯ ಚಿನ್ನಾಭರಣಗಳು ಪತ್ತೆಯಾಗಿತ್ತು.





