ತಿಪಟೂರು: ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತ್ಯು; ಆತ್ಮಹತ್ಯೆ ಶಂಕೆ

ತುಮಕೂರು, ಮೇ 8: ಅರಸಿಕೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಿಪಟೂರು ರೈಲು ನಿಲ್ದಾಣದ ಬಳಿ ಇಂದು ನಡೆದಿದೆ.
ಚಲಿಸುತ್ತಿದ್ದ ರೈಲಿಗೆ ಬಿ.ಎಚ್. ರಸ್ತೆಯಲ್ಲಿರುವ ಮಡೆನೂರು ಕಬ್ಬಿಣ ಸೇತುವೆಯ ಮೇಲ್ಭಾಗದಿಂದ ಆತ ನೆಗೆದಿರಬಹುದು ಎಂದು ರೈಲ್ವೆ ಚಾಲಕರಾದ ಅನಂತ ಪದ್ಮನಾಬ್ ಮತ್ತು ರಾಯ್ ತಿಳಿಸಿದ್ದಾರೆ. ಇದೊಂದು ಆತ್ಮಹತ್ಯೆ ಕೃತ್ಯವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ತನಿಖೆ ನಡೆಸುತ್ತಿದ್ದಾರೆ.
Next Story





