ಜೆಡಿಎಸ್ ಯುವ ರಾಜ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಪುನರಾಯ್ಕೆ: ಮಂಗಳೂರಿನಲ್ಲಿ ಕಾರ್ಯಕರ್ತರ ಸಂಭ್ರಮ

ಮಂಗಳೂರು, ಮೇ 8: ಕರ್ನಾಟಕ ಪ್ರದೇಶ ಯುವ ಜನತಾದಳ(ಜಾತ್ಯತೀತ) ನೂತನ ರಾಜ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಪುನರ್ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ರವಿವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಹಾಗೂ ಅಶ್ರಮಕ್ಕೆ ಭೇಟಿ ನೀಡಿ ಸಿಹಿ ಹಂಚಿ ಸಂಭ್ರಮಿದರು.
ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್ಶಕ್ ಇಸ್ಮಾಯಿಲ್, ಜಿಲ್ಲಾ ಕಾರ್ಯದರ್ಶಿಗಳಾದ ದೀಪಕ್, ನವಾಝ್ ಕುಪ್ಪೆಪದವು, ಶಿಹಾಬ್, ಕಲಂದರ್, ಸಿನಾನ್, ತೇಜಸ್ ನಾಯಕ್, ಔಸಫ್, ಮುಹಮ್ಮದ್ ಅಬ್ದುಲ್ ಹಾದಿ, ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು
Next Story





