ಕುಂಪನಮಜಲು: ಯುವಕನ ಹತ್ಯೆಗೆ ವಿಫಲ ಯತ್ನ

ಫರಂಗಿಪೇಟೆ ಮೇ 8: ಕುಂಪನಮಜಲ್ ಸಮೀಪ ದಾರಿ ಕೇಳುವ ನೆಪದಲ್ಲಿ ಸಾರ್ವಜನಿಕ ನೀರು ಬಿಡುವ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ತಲವಾರು ದಾಳಿ ನಡೆಸಿರುವುದು ವರದಿಯಾಗಿದೆ.
ಕುಂಪನಮಜಲ್ ಪ್ರದೇಶಕ್ಕೆ ಸಾರ್ವಜನಿಕ ಪೈಪ್ ನೀರು ಬಿಡುವ ವೃತ್ತಿ ಮಾಡುತ್ತಿರುವ ಕರೀಮ್ ದಾಳಿಗೊಳದವರು.
ಕರೀಮ್ ಎಂದಿನಂತೆ ಇಂದು ಮುಂಜಾನೆ 5:30ಕ್ಕೆ ಕೊಡಿಮಜಲ್ ಎಂಬಲ್ಲಿಗೆ ನೀರಿನ ಪೈಪ್ ನ ಗೇಟ್ ಹಾಲ್ ತೆರೆಯಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೋಡಿಮಜಲ್ ನಲ್ಲಿ ಮಾಜಿ ಪಂಚಾಯತ್ ಸದಸ್ಯ ಚಂದಪ್ಪರ ಮನೆಯ ಸಮೀಪ ಕರೀಮ್ ಅವರ ಮೇಲೆ ಅಪರಿಚಿತನೋರ್ವ ದ್ವಿಚಕ್ರ ವಾಹನ ನಿಲ್ಲಿಸಲು ಸೂಚಿಸಿದೆನ್ನಲಾಗಿದೆ. ಕುಂಪನಮಜಲ್ ಗೆ ಹೋಗುವ ದಾರಿ ಕೇಳಿ ಬಳಿಕ ದ್ವಿಚಕ್ರ ವಾಹನದ ಇಂಜಿನ್ ಆಫ್ ಮಾಡು ಎಂದಾಗ ಅಪಾಯದ ಸೂಚನೆ ಅರಿತ ಕರೀಮ್ ದ್ವಿಚಕ್ರ ವಾಹನವನ್ನು ಮುಂದೆ ಚಲಾಯಿಸಿದರು. ಈ ಸಂದರ್ಭ ಸ್ವಲ್ಪ ದೂರದಲ್ಲಿ ಇಬ್ಬರು ಕರೀಮ್ ಅವರ ಮೇಲೆ ತಲ್ವಾರ್ ಬೀಸಿದ್ದಾರೆ. ಕರೀಮ್ ದಾಳಿಯಿಂದ ತಪ್ಪಿಸಿಕೊಂಡು ದ್ವಿಚಕ್ರ ವಾಹನ ವೇಗವಾಗಿ ಚಲಾಯಿಸಿಕೊಂಡು ಪಾರಾಗಿದ್ದಾರೆ.
ಸದ್ಯ ಕರೀಮ್ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.