ಸಿತಾರ್ ವಾದಕ ಉಸ್ತಾದ್ ರಯೀಸ್ ಖಾನ್ ವಿಧಿವಶ

ಕರಾಚಿ,ಮೇ 8: ಪಾಕಿಸ್ತಾನದ ಖ್ಯಾತ ಸಿತಾರ್ ವಾದಕ ಉಸ್ತಾದ್ ರಯೀಸ್ ಖಾನ್ ವಿಧಿವಶರಾಗಿದ್ದಾರೆ.
77 ವರ್ಷದ ರಯೀಸ್ ಖಾನ್ ಅವರು ಪತ್ನಿ ಗಾಯಕಿ ಬಿಲ್ಕಿಸ್ ಖಾನಮ್ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
1939ರಲ್ಲಿ ರಾಯೀಸ್ ಖಾನ್ ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದ್ದರು.ರಾಯೀಸ್ ಖಾನ್ ಅವರು ಚಿಕ್ಕ ವಯಸ್ಸಿನಿಂದಲೇ ಸಿತಾರ್ ಅಭ್ಯಾಸ ಮಾಡಿದ್ದರು.
ಬಿಲ್ಕಿಸ್ ಖಾನಮ್ ರನ್ನು ವಿವಾಹವಾಗಿದ್ದ ರಾಯೀಸ್ ಖಾನ್ ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದರು.
Next Story