ಲಾರಿ-ಪಿಕ್‌ಅಪ್ ಢಿಕ್ಕಿ: ಇಬ್ಬರಿಗೆ ಗಾಯ

ಕಾಸರಗೋಡು, ಮೇ 8: ಲಾರಿ ಮತ್ತು ಪಿಕ್‌ಅಪ್ ವ್ಯಾನ್ ಪರಸ್ಪರ ಢಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಚಂದ್ರಗಿರಿ ರಸ್ತೆಯಲ್ಲಿ ನಡೆದಿದೆ.
ಪಿಕ್‌ಅಪ್ ವ್ಯಾನ್‌ನಲ್ಲಿದ್ದ ಭಟ್ಕಳದ ಹಾರಿಸ್(29) ಮತ್ತು ಝಾರ್ಖಂಡ್ ನ ಮುಹಮ್ಮದ್ ಆಝಾದ್(28) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ವಾಹನದಲ್ಲಿ ಸಿಲುಕಿದ್ದ ಹಾರಿಸ್ ಮತ್ತು ಆಝಾದ್ರನ್ನು ಹೊರತೆಗೆದು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರು.
Next Story