ನಕಲಿ ಸಹಿ ದಾಖಲೆ ಬಳಸಿ ವಿದ್ಯುತ್ ಸಂಪರ್ಕ: ದೂರು
ಗಂಗೊಳ್ಳಿ, ಮೇ 8: ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನಕಲಿ ಸಹಿ ಹಾಗೂ ದಾಖಲೆ ಬಳಸಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ವಿದ್ಯುತ್ ಗುತ್ತಿಗೆದಾರರಿಬ್ಬರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಗುತ್ತಿಗೆದಾರರಾಗಿರುವ ನಾಡಾ ಇಲೆಕ್ಟ್ರಿಕ್ಸ್‌ನ ದಿನೇಶ್ ತಾರೀಬೇರು ಮತ್ತು ನಾಡಾ ಗುಡ್ಡೆಯಂಗಡಿ ಗುರು ಇಲೆಕ್ಟ್ರಿಕಲ್ಸ್ ನ ಭಾಸ್ಕರ ಭಟ್ ನಾಡ ಗ್ರಾಪಂನಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಹಿ ಸೀಲು, ಕಚೇರಿಯ ಸೀಲು, ಕಚೇರಿಯ ಲೆಟರ್ ಹೆಡ್ ನಕಲಿ ಮಾಡಿಸಿ 2016ರ ಜೂ.23ರಂದು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮೆಸ್ಕಾಂ ಇಲಾಖೆಗೆ ಸಲ್ಲಿಸಿದ್ದರು.
ಅದರಂತೆ ನಾಡಾ ಗ್ರಾಮದ ನಿವಾಸಿಗಳಾದ ಚೆನ್ನಮ್ಮ ಪೂಜಾರ್ತಿ, ನಾರಾಯಣ ಪೂಜಾರಿ, ನಾಗರಾಜ ಹೆಬ್ಬಾರ್, ಫ್ಲೆವಿ ಡಿಆಲ್ಮೇಡಾ, ಗೀತಾ ಶೆಡ್ತಿ ಅವರ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಸರಕಾರಕ್ಕೆ ವಂಚಿಸಿರುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
Next Story





