ಹುಲ್ಲಿನ ರಾಶಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

ಮುಂಡಗೋಡ, ಮೇ 8: ಮೇವಿಗಾಗಿ ಇಟ್ಟಿದ್ದ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗಲಿ ಸುಮಾರು 1 ಲಕ್ಷ ರೂ. ನಷ್ಟವಾದ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ನಡೆದಿದೆ
ಗಣಪತಿ ಹುಲಿಯಪ್ಪ ಟಿಕೋಜಿ ಎಂಬವರು ಮೇವಿಗಾಗಿ ಶೇಖರಿಸಿಟ್ಟಿದ್ದ ಹುಲ್ಲಿಗೆ ಬೆಂಕಿ ತಗಲಿದೆ. ವಿಷಯ ತಿಳಿಯುತ್ತಿದ್ದಂತೆ ಮುಂಡಗೋಡ ಅಗ್ನಿ ಶಾಮಕ ದಳ ಬೆಂಕಿ ಆರಿಸಿ ಹೆಚ್ಚಿನ ನಷ್ಟ ಆಗುವುದನ್ನು ತಪ್ಪಿಸಿದ್ದಾರೆ. ಘಟನೆಯಿಂದ ಸುಮಾರು 1 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ.
Next Story





