ಹೃದ್ರೋಗ ಚಿಕಿತ್ಸೆಗೆ ಧರ್ಮಸ್ಥಳದಿಂದ 20 ಲಕ್ಷ ರೂ. ನೆರವು

ಬೆಳ್ತಂಗಡಿ, ಮೇ 8: ಬೆಂಗಳೂರಿನಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬಡ ಹಾಗೂ ಅರ್ಹ ಹೃದ್ರೋಗಿಗಳ ಚಿಕಿತ್ಸೆಗಾಗಿ ಧರ್ಮಸ್ಥಳಧ ದರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
ಧರ್ಮಸ್ಥಳದ ಆರ್ಥಿಕ ನೆರವಿನಿಂದ ಕಳೆದ ವರ್ಷ 124 ಬಡ ಹೃದ್ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದು, ಅವರೆಲ್ಲ ಪೂರ್ಣ ಆರೋಗ್ಯ ಹೊಂದಿದ್ದಾರೆ ಎಂದು ಹೃದ್ರೋಗ ಆಸ್ಪತ್ರೆಯ ನಿರ್ದೇಶಕ, ಖ್ಯಾತ ಹೃದಯ ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ತಿಳಿಸಿ ಸಿದ್ದಾರೆ.
ಇಂಡೋನೇಶಿಯಾ, ಪಶ್ಚಿಮ ಬಂಗಾಲ ಹಾಗೂ ದೇಶದ ವಿವಿಧ ರಾಜ್ಯಗಳ ರೋಗಿಗಳೂ ಈ ನೆರವಿನ ಪ್ರಯೋಜನ ಪಡೆದಿದ್ದಾರೆ. ಅರ್ಹ ರೋಗಿಗಳಿಗೆ ಮುಂದಿನ ವರ್ಷದಲ್ಲಿ ಚಿಕಿತ್ಸೆಗಾಗಿ 20 ಲಕ್ಷ ರೂ. ನೆರವನ್ನು ನೀಡಲಾಗುವುದು. 2009ರಿಂದ ನಿರಂತರವಾಗಿ ಅರ್ಹ ಹೃದ್ರೋಗಿಗಳ ಚಿಕಿತ್ಸೆಗಾಗಿ ಧರ್ಮಸ್ಥಳದಿಂದ 20 ಲಕ್ಷ ರೂ. ನೆರವು ನೀಡಲಾಗುತ್ತಿದೆ
Next Story





