ರಾಜ್ಯಮಟ್ಟದ ಬ್ಯಾಡ್ಮಿಂಟನ್: ವೈಭವ್ -ಅಮಿತ್‌ಗೆ ಪ್ರಶಸ್ತಿ

ಉಡುಪಿ, ಮೇ 8: ಮಣಿಪಾಲ ಬ್ಯಾಡ್ಮಿಂಟನ್ ಸ್ಪೋರ್ಟ್ಸ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 16ನೆ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದಲ್ಲಿ ವೈಭವ್ ಮತ್ತು ಅಮಿತ್ ಕುಮಾರ್ ವಿನ್ನರ್ಸ್ ಹಾಗೂ ಅಶಿತ್ ಸೂರ್ಯ ಮತ್ತು ಪ್ರವೀಣ್ ರನ್ನರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಫಲಿತಾಂಶ: 11ವರ್ಷ ಕೆಳಗಿನ ಬಾಲಕರ ಸಿಂಗಲ್ಸ್: ಪ್ರ- ಪ್ರಶಾಂತ್ ಕೋಟ್ಯಾನ್, ದ್ವಿ- ವಿಜೇಶ್ ದೇವಾಡಿಗ. 11ವರ್ಷ ಕೆಳಗಿನ ಬಾಲಕಿಯರ ಸಿಂಗಲ್ಸ್: ಪ್ರ- ಧ್ರುವಿ ಪ್ರಸಾದ್, ದ್ವಿ- ವಿಭಾ ಜಿ.ಎಂ. 13ವರ್ಷ ಕೆಳಗಿನ ಬಾಲಕರ ಸಿಂಗಲ್ಸ್: ಪ್ರ- ಲಾವ ವಡಕಲ್, ದ್ವಿ- ಪ್ರಶಾಂತ್ ಕೋಟ್ಯಾನ್. 13ವರ್ಷ ಕೆಳಗಿನ ಬಾಲಕಿಯರ ಸಿಂಗಲ್ಸ್: ಪ್ರ- ಅನನ್ಯ ಜೋಶಿ, ದ್ವಿ- ಶ್ರೇಯಾ.
15ವರ್ಷ ಕೆಳಗಿನ ಬಾಲಕರ ಸಿಂಗಲ್ಸ್: ಪ್ರ- ಗೌತಮ್ ಎಂ., ದ್ವಿ- ಲಾವ ವಡಕಲ್. 15ವರ್ಷ ಕೆಳಗಿನ ಬಾಲಕಿಯರ ಸಿಂಗಲ್ಸ್: ಪ್ರ- ಅಕಂಶಾ ಪೈ, ದ್ವಿ- ಆಕರ್ಷ ಎಚ್.ಎ. 17ವರ್ಷ ಕೆಳಗಿನ ಬಾಲಕರ ಸಿಂಗಲ್ಸ್: ಪ್ರ- ಪೃಥ್ವಿ ಪೈ, ದ್ವಿ- ಗೌರವ್ ಅಜಿಲ. 17ವರ್ಷ ಕೆಳಗಿನ ಬಾಲಕಿಯರ ಸಿಂಗಲ್ಸ್: ಪ್ರ-ಅಕಂಶಾ ಪೈ, ದ್ವಿ- ದಿಶಾ ಆಚಾರ್ಯ.
17ವರ್ಷ ಕೆಳಗಿನ ಬಾಲಕರ ಡಬಲ್ಸ್: ಪ್ರ- ಪೃಥ್ವಿ ಪೈ ಮತ್ತು ಗೌರವ್ ಅಜಿಲ, ದ್ವಿ- ಸಮಿತ್ ಎಸ್. ಮತ್ತು ಅದ್ನಾನ್ ಅಶ್ರಫ್. 17ವರ್ಷ ಕೆಳಗಿನ ಬಾಲಕಿಯರ ಡಬಲ್ಸ್: ಪ್ರ- ವೆನಿಟಿಯಾ ಪಾಯಸ್ ಮತ್ತು ಗಗನ, ದ್ವಿ- ಅಕಂಶಾ ಪೈ ಮತ್ತು ಅನನ್ಯ ಜೋಶಿ. 40ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್: ಪ್ರ- ರಿಯಾಝ್ ಮತ್ತು ಪರಿಮಳ್, ದ್ವಿ- ಗಿರೀಶ್ ಮತ್ತು ನಿತಿನ್.
ಸಮಾರೋಪ ಸಮಾರಂಭ: ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ವಿಜೇತರಿಗೆ ಬಹುಮಾನ ವಿತರಿಸಿದರು. ಅಧ್ಯಕ್ಷತೆಯನ್ನು ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಸತೀಶ್ ಕಾಮತ್ ವಹಿಸಿದ್ದರು.
ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕೆ.ಬಾಲಗಂಗಾಧರ್ ರಾವ್, ಅಶೋಕ್ ಪಣಿಯಾಡಿ, ವೈ.ಸುಧೀರ್, ವೆಂಕಟೇಶ್ ಶೇಟ್, ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







