ಸನ್‌ರೈಸರ್ಸ್‌ಗೆ ಜಯ

ಹೈದರಾಬಾದ್, ಮೇ 8: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 48ನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 139 ರನ್‌ಗಳ ಸವಾಲನ್ನು ಪಡೆದ ಸನ್‌ರೈಸರ್ಸ್ ತಂಡ ಇನ್ನೂ 10ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟದಲ್ಲಿ ರನ್ ಗಳಿಸಿತು. ಶಿಖರ್ ಧವನ್ ಔಟಾಗದೆ 62 ರನ್(46ಎ, 4ಬೌ, 2ಸಿ), ಹೆನ್ರಿಕ್ಸ್ 44 ರನ್, ವಿ ಶಂಕರ್ ಔಟಾಗದೆ 15ರನ್, ಡೇವಿಡ್ ವಾರ್ನರ್ 6ರನ್, ಯುವರಾಜ್ ಸಿಂಗ್ 9 ರನ್ ಗಳಿಸಿದರು.
ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಾಸ್ ಜಯಿಸಿದ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಸನ್‌ರೈಸರ್ಸ್ ತಂಡದ ಸಂಘಟಿತ ದಾಳಿ ಮುಂದೆ ರನ್ ಗಳಿಸಲು ಮುಂಬೈ ತಂಡದ ದಾಂಡಿಗರು ಪರದಾಡಿದರು. ರೋಹಿತ್ ಶರ್ಮ ಔಟಾಗದೆ 67ರನ್, ಹಾರ್ದಿಕ್ ಪಾಂಡ್ಯ 10 ರನ್ ಮತ್ತು ಪಾರ್ಥಿವ್ ಪಟೇಲ್ 23 ರನ್‌ಗಳ ಕೊಡುಗೆ ನೀಡಿ ತಂಡಕ್ಕೆ ಸಾಧಾರಣ ಮೊತ್ತ ದಾಖಲಿಸಲು ನೆರವಾದರು. ಸನ್‌ರೈಸರ್ಸ್ ತಂಡದ ಎಸ್.ಕೌಲ್ 24ಕ್ಕೆ 3, ಬಿ.ಕುಮಾರ್ 29ಕ್ಕೆ 2, ಮುಹಮ್ಮದ್ ನಬಿ 13ಕ್ಕೆ 1, ರಶೀದ್ ಖಾನ್ 22ಕ್ಕೆ 1 ವಿಕೆಟ್ ಪಡೆದರು.
,,,,,,,,,,





